ಕರ್ನಾಟಕ

karnataka

ETV Bharat / bharat

ಹದಗೆಟ್ಟ ರಸ್ತೆ ಸರಿಪಡಿಸುತ್ತಿರುವ ಚಿಣ್ಣರು: ವಿಡಿಯೋ ಹಿಂದಿನ ಸತ್ಯಾಂಶ ತಿಳಿಯಲು ಮುಂದಾದ ಅಧಿಕಾರಿಗಳು - ಭಗ್ರಾಕ್‌ನ ಬಾಗ್ಮರಾ ಗ್ರಾಮದ ಮಕ್ಕಳು

ಭದ್ರಾಕ್‌ನ ಬಾಗ್ಮರಾ ಗ್ರಾಮದ ಮಕ್ಕಳು ಕಲ್ಲು, ಇಟ್ಟಿಗೆ ತುಂಡುಗಳನ್ನು ಸಂಗ್ರಹಿಸಿ ಸ್ವಯಂಪ್ರೇರಣೆಯಿಂದ ರಸ್ತೆಗಳನ್ನು ಸರಿಪಡಿಸುತ್ತಿರುವ ವಿಡಿಯೋ ಚರ್ಚೆ ಹುಟ್ಟು ಹಾಕಿದೆ. ಮಕ್ಕಳು ನಿಜವಾಗಲೂ ರಸ್ತೆ ಸರಿಪಡಿಸುತ್ತಿದ್ರಾ ಅಥವಾ ಆಟ ಆಡುತ್ತಿದ್ರಾ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Childrens repair roads by collecting stones, bricks from around
ಹಾಳಾದ ರಸ್ತೆ ಸರಿಪಡಿಸುತ್ತಿರುವ ಚಿಣ್ಣರು

By

Published : Jul 29, 2021, 6:14 PM IST

ಭದ್ರಾಕ್​​(ಒಡಿಶಾ): ಇಲ್ಲೊಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಮಕ್ಕಳು ಏನೇ ಮಾಡಿದರೂ ಚೆಂದಾ ಅಂತಾರೆ. ಆದರೆ, ಈ ವಿಡಿಯೋ ಮಾತ್ರ ದೇಶದ ಪರಿಸ್ಥಿತಿ ಹಾಗೂ ಕೆಲ ರಾಜಕಾರಣಿಗಳ ಬೇಜವಾಬ್ದಾರಿಗೆ ಹಿಡಿದ ಕೈ ಗನ್ನಡಿಯಂತಿದೆ.

ಭದ್ರಾಕ್‌ನ ಬಾಗ್ಮರಾ ಗ್ರಾಮದ ಮಕ್ಕಳು ಕಲ್ಲು, ಇಟ್ಟಿಗೆ ತುಂಡುಗಳನ್ನು ಸಂಗ್ರಹಿಸಿ ಸ್ವಯಂಪ್ರೇರಣೆಯಿಂದ ರಸ್ತೆಗಳನ್ನು ಸರಿಪಡಿಸುತ್ತಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಚಿಣ್ಣರು ಕಲ್ಲುಗಳನ್ನು ಹಾಳಾದ ರಸ್ತೆ ಹಾಗೂ ಗುಂಡಿಗೆ ತೆಗೆದುಕೊಂಡು ಹೋಗಿ ಸುರಿಯುತ್ತಿದ್ದಾರೆ.

ಹಾಳಾದ ರಸ್ತೆ ಸರಿಪಡಿಸುತ್ತಿರುವ ಚಿಣ್ಣರು

ನಾವು ಈ ಸಂಬಂಧ ಮಾಹಿತಿಯನ್ನು ಪರಿಶೀಲಿಸಬೇಕಾಗಿದೆ. ಅದು ನಿಜವೆಂದು ತಿಳಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾಕ್ ಬಿಡಿಒ ಮನೋಜ್ ಬೆಹೆರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details