ನವದೆಹಲಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿ ಇದೆ. ಅಂತೆಯೇ ಸಮಾಜದ ಹಿತರಕ್ಷಣೆ, ದೇಶದ ಅಭಿವೃದ್ಧಿ ಇಂದಿನ ಮಕ್ಕಳ ಕೈಯಲ್ಲಿದೆ. ಈ ಹಿನ್ನೆಲೆ ವಿಶೇಷವಾದ ಅಭಿಯಾನವೊಂದು ಆರಂಭವಾಗಿದ್ದು, ಅದೇ #ChildrenOfNewIndia.
ಈ ಬಗ್ಗೆ ಟ್ವೀಟ್ ಮಾಟಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ "ಪ್ರತಿ ಕಷ್ಟದಲ್ಲೂ ನಾವು ನಿಮ್ಮೊಂದಿಗೆ ಹೋರಾಡುತ್ತೇವೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತೇವೆ. ನವಭಾರತದ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸೋಣ" ಎಂದಿದ್ದಾರೆ.
"ರಾಷ್ಟ್ರದ ಮುಂದಿನ 75 ವರ್ಷಗಳು ನವಭಾರತದ ಮಕ್ಕಳದ್ದಾಗಿದೆ. ಅವರು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಕೊಡುಗೆ ನೀಡುವ ಪ್ರತಿಜ್ಞೆಯನ್ನು ಬೆಳೆಸಿಕೊಳ್ಳಲು ಸಹಕರಿಸೋಣ" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಈ ಹೊತ್ತಿನಲ್ಲಿ ಇಂದಿನ ಮಕ್ಕಳನ್ನು ನಾಳಿನ ಉತ್ತಮ ಪ್ರಜೆಗಳಾಗಲು ಪ್ರೋತ್ಸಾಹಿಸುವ, ನವ ಭಾರತದತ್ತ ಸಾಗುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಹಲವರು #ChildrenOfNewIndia ಹ್ಯಾಶ್ಟಗ್ಯಾಗ್ನಡಿ ಟ್ವೀಟ್ ಮಾಡಿದ್ದು, ಅನೇಕ ಮಕ್ಕಳು ಈ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ನವಭಾರತದತ್ತ ಹೆಜ್ಜೆ ಹಾಕಲು ಕೈ ಜೋಡಿಸುತ್ತಿದ್ದಾರೆ.