ಕರ್ನಾಟಕ

karnataka

ETV Bharat / bharat

15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ; 2022ರ ಜ.1ರಿಂದ ನೋಂದಣಿ ಆರಂಭ - ಮಕ್ಕಳಿಗೆ ಕೋವಿಡ್‌ ಲಸಿಕೆ

ನೋಂದಣಿ ಪ್ರಕ್ರಿಯೆಯಲ್ಲಿ ಮಕ್ಕಳು ಕೋವಿಡ್-19 ವ್ಯಾಕ್ಸಿನೇಷನ್‌ಗಾಗಿ ಕೋವಿನ್‌ ಪೋರ್ಟಲ್‌ನಲ್ಲಿ ವಿದ್ಯಾರ್ಥಿ ಐಡಿ ಕಾರ್ಡ್‌ ಸಲ್ಲಿಸುವ ಅಗತ್ಯವಿದೆ. ನಾವು ನೋಂದಣಿಗಾಗಿ ಹೆಚ್ಚುವರಿ (10ನೇ ತರಗತಿ) ಗುರುತಿನ ಚೀಟಿಯನ್ನು ಸೇರಿಸಿದ್ದೇವೆ..

Children in the age group of 15-18 years will be able to register on the CoWIN app from Jan 1
15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ; 2022ರ ಜ.1ರಿಂದ ನೋಂದಣಿ ಆರಂಭ

By

Published : Dec 27, 2021, 2:03 PM IST

ನವದೆಹಲಿ :ಕೋವಿಡ್ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ 2022ರ ಜನವರಿ 3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ.

ಇದಕ್ಕಾಗಿ ಜನವರಿ 1ರಿಂದಲೇ ಕೋವಿನ್‌ ಆ್ಯಪ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೋವಿನ್‌ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ. ಆರ್.ಎಸ್. ಶರ್ಮಾ ತಿಳಿಸಿದ್ದಾರೆ.

ನೋಂದಣಿ ಪ್ರಕ್ರಿಯೆಯಲ್ಲಿ ಮಕ್ಕಳು ಕೋವಿಡ್-19 ವ್ಯಾಕ್ಸಿನೇಷನ್‌ಗಾಗಿ ಕೋವಿನ್‌ ಪೋರ್ಟಲ್‌ನಲ್ಲಿ ವಿದ್ಯಾರ್ಥಿ ಐಡಿ ಕಾರ್ಡ್‌ ಸಲ್ಲಿಸುವ ಅಗತ್ಯವಿದೆ. ನಾವು ನೋಂದಣಿಗಾಗಿ ಹೆಚ್ಚುವರಿ (10ನೇ ತರಗತಿ) ಗುರುತಿನ ಚೀಟಿಯನ್ನು ಸೇರಿಸಿದ್ದೇವೆ.

ವಿದ್ಯಾರ್ಥಿಗಳ ಗುರುತಿನ ಚೀಟಿ ಯಾಕೆ ಕೇಳಿರುವುದು ಅಂದರೆ ಕೆಲವರು ಆಧಾರ್ ಅಥವಾ ಇತರ ಗುರುತಿನ ಚೀಟಿ ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.

ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ ಮಕ್ಕಳಲ್ಲಿ ತುರ್ತು ಬಳಕೆಗಾಗಿ ಈಗಾಗಲೇ ಅನುಮೋದನೆಯನ್ನು ಪಡೆದಿದ್ದು, 15 ರಿಂದ 18 ವಯಸ್ಸಿನವರಿಗೆ ನೀಡಲಾಗುವ ಏಕೈಕ ಲಸಿಕೆ ಇದಾಗಿದೆ.

ಇದನ್ನೂ ಓದಿ:ಕೋವ್ಯಾಕ್ಸಿನ್‌ ಸದ್ಯಕ್ಕೆ ಮಕ್ಕಳಿಗೆ ಲಭ್ಯವಿರುವ ಸಂಭಾವ್ಯ ಏಕೈಕ ಕೋವಿಡ್ ಲಸಿಕೆ

ABOUT THE AUTHOR

...view details