ಹಾರ್ದೋಯಿ(ಉತ್ತರ ಪ್ರದೇಶ) : ಆಟ ಆಡುತ್ತಿದ್ದಾಗ ಮೂರು ವರ್ಷದ ಬಾಲಕ ತೆರೆದ ಬೋರ್ವೆಲ್ನಲ್ಲಿ ಬಿದ್ದ ಘಟನೆ ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯ ಹರ್ಪಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸತೌತ ಗ್ರಾಮದಲ್ಲಿ ನಡೆದಿದೆ.
ಶ್ಯಾಮ್ಜೀತ್, ಕೊಳವೆ ಬಾವಿಗೆ ಬಿದ್ದಿರುವ ಬಾಲಕ. ಈತ ತನ್ನ 7 ವರ್ಷದ ಅಣ್ಣನ ಜೊತೆ ಆಟವಾಡಲು ಹೊರಟಿದ್ದನು. ಈ ವೇಳೆ ತೆರೆದ ಕೊಳವೆ ಬಾವಿ ಕುಸಿದಿದ್ದು, ಶ್ಯಾಮ್ಜೀತ್ ಸುಮಾರು 25 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ.