ಪೂರ್ಣಿಯಾ(ಬಿಹಾರ):ಕಾವಲುಗಾರನಿಗೆ ಥಳಿಸಿ, ಮಕ್ಕಳ ಸುಧಾರಣಾ ಕೇಂದ್ರದಿಂದ 11 ಬಾಲಕೈದಿಗಳು ಪರಾರಿಯಾಗಿದ್ದ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ 4.15ಕ್ಕೆ ಸುಮಾರು 11 ಮಕ್ಕಳು ಮುಖ್ಯಗೇಟ್ ಬಳಿ ನಿಂತಿದ್ದ ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಕಾಲ್ಕಿತ್ತಿದ್ದರು. ಆದರೆ ಕತಿಹಾರ್ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಎಲ್ಲಾ ಮಕ್ಕಳನ್ನು ವಿಕ್ರಮಪುರ ಎಂಬಲ್ಲಿ ವಶಕ್ಕೆ ಪಡೆದಿದ್ದು, ನಿಯಮಾನುಸಾರ ಪೂರ್ಣಿಯಾ ಪೊಲೀಸರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಎಸ್ಪಿ ಜಿತೇಂದ್ರ ಕುಮಾರ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ಮಕ್ಕಳು ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಬೆಳಗ್ಗೆ 4:15ರ ಸುಮಾರಿಗೆ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿಯ ತಲೆಯನ್ನು ಬಟ್ಟೆಯಿಂದ ಸುತ್ತಿ, ಥಳಿಸಿದ್ದಾರೆ. ನಂತರ ಮುಖ್ಯದ್ವಾರದ ಬಾಗಿಲನ್ನು ತೆರೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ತಿಳಿಸಿದರು.