ಕರ್ನಾಟಕ

karnataka

ETV Bharat / bharat

ಆಸ್ತಿ, ಹಣ ಹಂಚಲಿಲ್ಲವೆಂದು ತಾಯಿಯ ಅಂತ್ಯಕ್ರಿಯೆ ಮಾಡದ ಮಕ್ಕಳು: ಆಸ್ಪತ್ರೆಯಲ್ಲಿ ಶವ ಅನಾಥ - ತಾಯಿಯ ಮೃತ ದೇಹ

ತಮಗೆ ಆಸ್ತಿ ಮತ್ತು ಹಣವನ್ನು ಹಂಚಲಿಲ್ಲ ಎಂದು ಕೋಪಗೊಂಡ ಮೂವರು ಮಕ್ಕಳು ತಾಯಿಯ ಮೃತದೇಹವನ್ನು ಸಂಸ್ಕಾರ ಮಾಡಲು ಹಿಂದೇಟು ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

Kishtavva
ಕಿಷ್ಟವ್ವ

By

Published : May 8, 2023, 2:16 PM IST

ಕಾಮರೆಡ್ಡಿ (ತೆಲಂಗಾಣ) : ತಾಯಿ-ತಂದೆ ದೇವರಿಗೆ ಸಮಾನ. ಮಕ್ಕಳ ಏಳಿಗೆಗಾಗಿ ಇಡೀ ಜೀವನವನ್ನೇ ಮುಡುಪಾಗಿಡುತ್ತಾರೆ. ಅವರು ಮಾಡಿದ ತ್ಯಾಗದ ಮಹತ್ವವನ್ನು ಶಬ್ದಗಳಲ್ಲಿ ಹೇಳುವುದು ಕಠಿಣ. ಆದ್ರೆ, ಆಸ್ತಿ ಹಂಚಿಕೆ ಹಾಗೂ ಬ್ಯಾಂಕ್‌ನಲ್ಲಿರುವ ಠೇವಣಿ ಹಣವನ್ನು ನೀಡಲಿಲ್ಲವೆಂದು ಕೋಪಗೊಂಡು ಮೃತ ತಾಯಿಯ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲು ಮಗ ಮತ್ತು ಪುತ್ರಿಯರು ನಿರಾಕರಿಸಿದ ಅಮಾನವೀಯ ಘಟನೆ ಕಾಮರೆಡ್ಡಿಯಲ್ಲಿ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಾಮರಡ್ಡಿಯ ಆರ್.ಬಿ.ನಗರ ಕಾಲೋನಿಯ (Kishtavva) ಕಿಷ್ಟವ್ವ (70) ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ತಿಂಗಳ 21 ರಂದು ಕುಟುಂಬಸ್ಥರು ಆಕೆಯನ್ನು ಕಾಮರೆಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿಷ್ಟವ್ವ, ಶನಿವಾರ (ಮೇ. 6) ರಾತ್ರಿ ಮೃತಪಟ್ಟಿದ್ದಾರೆ. ಆಕೆಯ ಸಾವಿನ ಸುದ್ದಿಯನ್ನು ಆಸ್ಪತ್ರೆಯ ಸಿಬ್ಬಂದಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆದರೆ, ಎರಡು ದಿನ ಕಳೆದರೂ ಮಹಿಳೆಯ ಮಗ ಮತ್ತು ಪುತ್ರಿಯರು ತಾಯಿಯ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿಲ್ಲ. ಈ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿಷ್ಟವ್ವನ ಮೃತದೇಹವನ್ನು ಶವಾಗಾರದಲ್ಲಿ ಸಂರಕ್ಷಿಸಲಾಗಿದೆ.

ಇದನ್ನೂ ಓದಿ :ಬೈಕ್‌​ನಲ್ಲಿ 50ಕ್ಕೂ ಹೆಚ್ಚು ದೇಶ ಸುತ್ತಿ ದಾಖಲೆ ಬರೆದು ಕಣ್ಮರೆಯಾದ ಮಗನಿಗೆ ಸ್ಮಾರಕ ಕಟ್ಟಿದ ತಾಯಿ !

ಮೃತ ಮಹಿಳೆಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದು ಕಾಮರೆಡ್ಡಿಯಲ್ಲಿ ವಾಸಿಸುತ್ತಿದ್ದಾರೆ. ಕಿಷ್ಟವ್ವನ ಹೆಸರಿನಲ್ಲಿ ಮನೆ ಇದೆ. ಆಕೆಯ ಬ್ಯಾಂಕ್‌ ಖಾತೆಗೆ 1.70 ಲಕ್ಷ ರೂಪಾಯಿ ಜಮೆಯಾಗಿದ್ದು, ಈ ಆಸ್ತಿ ಮತ್ತು ಹಣವನ್ನು ಮನಗೆ ನೀಡಲಿಲ್ಲವೆಂದು ಮಕ್ಕಳು ಕೋಪಗೊಂಡಿದ್ದರು. ಅಷ್ಟೇ ಅಲ್ಲದೆ, ಮೃತ ಮಹಿಳೆ ತನ್ನ ಸಂಬಂಧಿಯೋರ್ವರನ್ನು ನಾಮಿನಿಯಾಗಿ ಇಟ್ಟುಕೊಂಡಿದ್ದಳು. ಇದರಿಂದ ಆಕ್ರೋಶಗೊಂಡ ಕಿಷ್ಟವ್ವನ ಮಕ್ಕಳು ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗದೇ ಅನಾಗರಿಕರಂತೆ ವರ್ತಿಸಿದ್ದಾರೆ. ಇವರ ವರ್ತನೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ :ದಶಾಶ್ವಮೇಧ ಘಾಟ್‌ನಲ್ಲಿ ತಾಯಿ ಹೀರಾಬೆನ್ ಪಿಂಡ ದಾನ ಮಾಡಿದ ಪ್ರಧಾನಿ ಮೋದಿ ಸಹೋದರ

ಇನ್ನೊಂದೆಡೆ, ವೃದ್ಧೆಯ ಶವವನ್ನು ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಕಾಯುತ್ತಿದ್ದಾರೆ. ಯಾರೂ ಬಾರದಿದ್ದರೆ ನಗರಸಭೆ ಸಿಬ್ಬಂದಿ ಅನಾಥ ಶವವೆಂದು ಪರಿಗಣಿಸಿ, ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ :ಮನೆಯೇ ದೇವಾಲಯ : ತಾಯಿ ಮೂರ್ತಿ ಸ್ಥಾಪಿಸಿ ಸಹೋದರಿಯರಿಂದ ನಿತ್ಯ ಪೂಜೆ

ಈ ಮೇಲಿನ ಘಟನೆಗೆ ವಿರುದ್ಧವೆಂಬಂತೆ ಗುಜರಾತ್​ನ ಜುನಾಗಢದ ಮೂವರು ಸಹೋದರಿಯರು ತಮ್ಮ ತಾಯಿಯ ಸವಿನೆನಪಿಗಾಗಿ ಮನೆಯಲ್ಲೇ ಅಮ್ಮನ ಪ್ರತಿಮೆಯನ್ನು ಸ್ಥಾಪಿಸಿ ದೇವಾಲಯ ಕಟ್ಟಿದ್ದಾರೆ. ಈ ಸಹೋದರಿಯರು ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ತಮ್ಮ ತಾಯಿಗೆ ಗುಡಿಕಟ್ಟಿ ಮೂರ್ತಿಯನ್ನ ಸ್ಥಾಪಿಸಿ ನಿತ್ಯವೂ ಪೂಜೆ ಮಾಡುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಮನೆಯ ಪ್ರೇರಣ ಶಕ್ತಿಯಾಗಿ ತಾಯಿಯನ್ನ ನಿತ್ಯ ಆರಾಧನೆ ಮಾಡುತ್ತಿದ್ದಾರೆ.

ABOUT THE AUTHOR

...view details