ರಾಣಿವಾಡ (ರಾಜಸ್ಥಾನ): ಬಿಸಿಲಿನ ಝಳ ಹೆಚ್ಚಾಗಿ, ಬಾಯಾರಿ ಬಳಲುತ್ತಿದ್ದ ಐದು ವರ್ಷದ ಬಾಲಕಿಗೆ ಕುಡಿಯಲು ನೀರು ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಿನ್ನೆ ನಡೆದಿತ್ತು. ಇದೀಗ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜ್ಯ ಮಕ್ಕಳ ಆಯೋಗ ಜಿಲ್ಲಾಡಳಿತದಿಂದ ವರದಿ ಕೇಳಿದೆ.
ಕುಡಿಯಲು ನೀರು ಸಿಗದೆ ಪ್ರಾಣ ಬಿಟ್ಟ ಪುಟ್ಟ ಬಾಲಕಿ: ಘಟನೆಯ ವರದಿ ಕೇಳಿದ ಮಕ್ಕಳ ಆಯೋಗ - ನೀರಿಲ್ಲದೆ ಜೀವ ಬಿಟ್ಟ 5 ವರ್ಷದ ಮಗು. ವರದಿ ಕೇಳಿದೆ ಮಕ್ಕಳ ಆಯೋಗ
ರಾಯ್ಪುರದಿಂದ ತನ್ನ ಅಜ್ಜಿಯೊಂದಿಗೆ ಐದು ವರ್ಷದ ಬಾಲಕಿ ನಡೆದುಕೊಂಡು ರೋಡಾ ಗ್ರಾಮದತ್ತ ಬರುತ್ತಿದ್ದಳು. ಈ ವೇಳೆ ಉರಿಬಿಸಿಲು ತಾಳಲಾರದೆ ಬಾಲಕಿ ಬಳಲಿದ್ದಾಳೆ. ಆ ವೇಳೆ ನೀರು ಸಿಗದೆ ಸ್ವಲ್ಪ ದೂರ ಕ್ರಮಿಸಿದ ಬಳಿಕ ಪ್ರಾಣಬಿಟ್ಟಿದ್ದಾಳೆ ಎಂಬ ಮಾಹಿತಿ ದೊರೆತಿದೆ.
ನೀರಿಲ್ಲದೆ ಜೀವ ಬಿಟ್ಟ 5 ವರ್ಷದ ಮಗು
ಐದು ವರ್ಷದ ಬಾಲಕಿಗೆ ಕುಡಿಯಲು ನೀರು ಸಿಗದೆ ಮೃತಪಟ್ಟಿದ್ದು, ಬಾಲಕಿ ಜೊತೆಯಲ್ಲಿದ್ದ ವೃದ್ಧೆ ಕೂಡ ಮೂರ್ಛೆ ಹೋಗಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಕೂಡಲೇ ಸ್ಥಳಕ್ಕಾಗಮಿಸಿದ ರಾಣಿವಾಡ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದರು.
ರಾಯ್ಪುರದಿಂದ ತನ್ನ ಅಜ್ಜಿಯೊಂದಿಗೆ ಬಾಲಕಿ ನಡೆದುಕೊಂಡು ರೋಡಾ ಗ್ರಾಮದತ್ತ ಬರುತ್ತಿದ್ದಳು. ಈ ವೇಳೆ ಉರಿಬಿಸಿಲು ತಾಳದೆ ಬಾಲಕಿ ಬಳಲಿದ್ದಾಳೆ. ತಕ್ಷಣಕ್ಕೆ ನೀರು ಸಿಗದೆ ಸ್ವಲ್ಪ ದೂರ ಕ್ರಮಿಸಿ ಪ್ರಾಣಬಿಟ್ಟಿದ್ದಾಳೆ ಎಂಬ ಮಾಹಿತಿ ದೊರೆತಿದೆ.