ಕಡಪ :ಜಿಲ್ಲೆಯ ಬುಗ್ಗವಂಕ ಎಂಬಲ್ಲಿನ ಕಾಲುದಾರಿ ಎರಡು ತಿಂಗಳ ಹಿಂದೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಶಾಲೆಗೆ ತೆರಳುವ ಮಕ್ಕಳು ಪರದಾಡುವಂತಾಗಿತ್ತು. ಶಾಲೆಗೆ ಹೋಗಲು ಇಚ್ಛಿಸಿದ ಮಕ್ಕಳು ತಾವೇ ಹಣ ಜೋಡಿಸಿ ಸೇತುವೆ ನಿರ್ಮಿಸಿದ್ದಾರೆ.
ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗಾಗಿ ನಿರ್ಮಿಸಿದ ಚಿಣ್ಣರು.. ಮಕ್ಕಳು ತೆರಳುತ್ತಿದ್ದ ಕಿರಿದಾದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಹೀಗಾಗಿ, ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಗಿತ್ತು. ಈ ಬಗ್ಗೆ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ನೀಡಿದ್ರೂ ಇದರ ಬಗ್ಗೆ ಕಾಳಜಿವಹಿಸಿಲ್ಲ.
ಓದಿ:ನಡುಗಡ್ಡೆ ಜಾತ್ರೆಗೆ ಕಟ್ಟುನಿಟ್ಟಿನ ಕಾನೂನು ; ವಿರಳ ಭಕ್ತರ ನಡುವೆ ನಡೆದ ನರಸಿಂಹ ದೇವರ ಜಾತ್ರೆ
ಇದರಿಂದ ಬೇಸತ್ತ ಮಕ್ಕಳು ತಮ್ಮ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸಿದರು. ಸೇತುವೆಯನ್ನು ತಾವೇ ನಿರ್ಮಿಸಲು ಯೋಚಿಸಿದರು. ಮಕ್ಕಳೆಲ್ಲ ಸೇರಿ ಹಣ ಸಂಗ್ರಹಿಸಿ ಕಾಲುದಾರಿ ನಿರ್ಮಿಸಿದರು. ಸುಮಾರು 3,000 ರೂ.ಗೆ ಕಡ್ಡಿಗಳನ್ನು ಖರೀದಿಸಿ ಶಾಲೆಗೆ ತೆರಳಲು ತಾತ್ಕಾಲಿಕ ಮಾರ್ಗ ಕಲ್ಪಿಸಿಕೊಂಡರು.
ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗಾಗಿ ನಿರ್ಮಿಸಿದ ಚಿಣ್ಣರು ಈಗಾಲಾದ್ರೂ ಇತ್ತ ಸರ್ಕಾರ ಗಮನ ಹರಿಸಿ ಮಕ್ಕಳಿಗೆ ಶಾಶ್ವತ ದಾರಿ ಕಲ್ಪಿಸಿಕೊಡುತ್ತಾ ಎಂದು ಕಾದು ನೋಡ್ಬೇಕಾಗಿದೆ.