ಮುಂಬೈ(ಮಹಾರಾಷ್ಟ್ರ): ಸರೊಗಸಿ ಕಾಯ್ದೆ 2021, ಅನುಸಾರ ಜಿಲ್ಲೆಗಳಲ್ಲಿ ಬಾಡಿಗೆ ತಾಯ್ತನದ ಮಂಡಳಿ (ಸರೊಗಸಿ ಬೋರ್ಡ್) ಸ್ಥಾಪನೆಗೆ ಮತ್ತು ಮುಂಬೈನಲ್ಲಿ ಬಂಜೆತನ ಚಿಕಿತ್ಸಾಲಯಗಳ ನೋಂದಣಿ ಪ್ರಕ್ರಿಯೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ದಂಪತಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾ. ಎಸ್ ವಿ ಗಂಗಾಪುರ್ವಾಲ ನೇತೃತ್ವದ ಪೀಠ ಈ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದ್ದು, ಡಿಸೆಂಬರ್ 12ರಂದು ಅರ್ಜಿ ವಿಚಾರಣೆ ನಡೆಸಲಿದೆ.
ಅರ್ಜಿ ಸಲ್ಲಿಸಿದ ದಂಪತಿಗಳಿಬ್ಬರಿಗೆ 40 ವರ್ಷ ತುಂಬಿದ್ದು, 2016ರಲ್ಲಿ ಅವರು ಮದುವೆಯಾಗಿದ್ದಾರೆ. ಮಹಿಳೆ ಡಯಾಬಿಟೀಸ್ನಿಂದ ಬಳಲುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ಇನ್ನಿತರ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಮಗುವಿಗಾಗಿ ಅನೇಕ ಬಂಜೆತನ ನಿವಾರಣೆ ಕ್ಲಿನಿಕ್ ಮತ್ತು ತಜ್ಞರನ್ನು ಭೇಟಿಯಾದರೂ ಯಾವುದೇ ಪ್ರಯೋಜನ ಪಡೆಯಲಿಲ್ಲ. ಈ ಹಿನ್ನೆಲೆ ದಂಪತಿಯು ಬಾಡಿಗೆ ತಾಯ್ತನದ ಮೊರೆ ಹೋಗಿದ್ದಾರೆ. ಆದರೆ, ಇದುವರೆಗೂ ಯಾವುದೇ ಕ್ಲಿನಿಕ್ಗಳು ಈ ಸರೊಗಸಿ ದಾಖಲಾತಿ ಹೊಂದಿಲ್ಲ ಎಂಬುದು ತಿಳಿದು ಬಂದಿದೆ.