ಪುಣೆ (ಮಹಾರಾಷ್ಟ್ರ): ಇಲ್ಲಿನ ಭೋರ್‌ನ ರೈರೇಶ್ವರ ಎಂಬ ಎತ್ತರದ ಪ್ರದೇಶದಲ್ಲಿ ವಾಸಿಸುತ್ತಿರುವ ಗರ್ಭಿಣಿಯನ್ನು ಆಕೆಯ ಮನೆಗೆ ಬಿಡಲು ಡೋಲಿ ಮೂಲಕ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ದೊರೆತಿದೆ.
ವಿಡಿಯೋದಲ್ಲಿ ಗರ್ಭಿಣಿಯನ್ನು ಡೋಲಿಯಲ್ಲಿ ಕೂರಿಸಿಕೊಂಡು, ಕಬ್ಬಿಣದ ಏಣಿಯ ಸಹಾಯದಿಂದ ಅಂದಾಜು 4,500 ಅಡಿ ಎತ್ತರದ ಸ್ಥಳಕ್ಕೆ ಜನರು ಕರೆದುಕೊಂಡು ಹೋಗುತ್ತಿದ್ದಾರೆ. ಮಹಿಳೆ ವಾಸಿಸುತ್ತಿರುವ ಸ್ಥಳ ತಲುಪಲು ಬೇರಾವುದೇ ಅನುಕೂಲಕರ ಮಾರ್ಗವಿಲ್ಲ. ಮಹಿಳೆಯ ಹೆಸರು ಯೋಗಿತಾ ವಿಕ್ರಂ ಜಂಗಮ್. ಈಕೆಗೆ ಕಳೆದ 5 ದಿನಗಳ ಹಿಂದೆ ಹೆರಿಗೆಯಾಗಿದೆ. ಇಲ್ಲಿ ಯಾವುದೇ ರಸ್ತೆ ಮಾರ್ಗವಿಲ್ಲದ ಕಾರಣ, ಸ್ಥಳೀಯರು ಕಳೆದ ಹಲವು ವರ್ಷಗಳಿಂದ ಇದೇ ರೀತಿ ತೊಂದರೆ ಅನುಭವಿಸುತ್ತಿದ್ದಾರೆ.