ಧನ್ಬಾದ್(ಜಾರ್ಖಂಡ್):ಜಿಲ್ಲೆಯಜೋರಾಫಟಕ್ ಸ್ಮಶಾನದ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಹೆಣ್ಣು ಮಗುವನ್ನು ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮಗುವನ್ನು ಮರಳಿ ಪಡೆಯಲು ಪೋಷಕರು ಪೊಲೀಸ್ ಠಾಣೆ ಸುತ್ತುತ್ತಿದ್ದಾರೆ. ಆದರೆ ಇದುವರೆಗೂ ಅಂತಹ ಯಾವುದೇ ಲಿಖಿತ ದೂರು ನಮಗೆ ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?:ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಜೋರಾಫಟಕ್‌ನ ಸ್ಮಶಾನದ ರಸ್ತೆಯಲ್ಲಿ ಇಬ್ಬರು ಕಳ್ಳರು ಬೈಕ್‌ನಲ್ಲಿ ಬಂದು ನಿಂತಿದ್ದಾರೆ. ಈ ವೇಳೆ, ಬೈಕ್‌ನ ಹಿಂದೆ ಕುಳಿತ ಸವಾರ ಕೆಳಗಿಳಿದು ಇಂಜಿನ್ ಬಳಿ ಬಂದು ರಿಪೇರಿ ಮಾಡುವಂತೆ ನಟಿಸಿದ್ದಾನೆ. ರಸ್ತೆಯಲ್ಲಿ ವಾಹನಗಳ ಸಂಚಾರ ಇಲ್ಲದನ್ನು ಗಮನಿಸಿ ಬೀದಿ ಬದಿಯಲ್ಲಿದ್ದ ತೆರೆದ ಕೋಣೆಗೆ ನುಗ್ಗಿದ್ದಾನೆ. ಬಳಿಕ ಅಲ್ಲಿ ಮಲಗಿದ್ದ ಮಗುವನ್ನು ಎತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಘಟನೆಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಮಗುವಿನ ಪೋಷಕರು, ತಾನು ಧನ್ಸಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಂದಮಾರಿ ನಿವಾಸಿ. ದಿನಗೂಲಿ ಮಾಡುತ್ತ ಜೀವನ ಸಾಗಿಸುತ್ತಿದ್ದೇನೆ. ನನಗೆ ಏಳು ವರ್ಷದ ಮಗ ಮತ್ತು ಒಂದು ತಿಂಗಳ ಹೆಣ್ಣು ಮಗುವಿದೆ. ಆದರೆ ಶನಿವಾರ ರಾತ್ರಿ ಇಬ್ಬರು ಅಪರಿಚಿತ ಬೈಕ್ ಕಳ್ಳರು ನನ್ನ ಹೆಣ್ಣು ಮಗುವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದರು.