ಕರ್ನಾಟಕ

karnataka

ETV Bharat / bharat

ಆಟವಾಡುತ್ತಾ ಟಿವಿ ರಿಮೋಟ್​ ಬ್ಯಾಟರಿ ನುಂಗಿದ ಎರಡು ವರ್ಷದ ಮಗು! - ಮಗುವಿನ ಹೊಟ್ಟೆಯಲ್ಲಿದ್ದ ಬ್ಯಾಟರಿ

ಆಟವಾಡುವಾಗ ಟಿವಿ ರಿಮೋಟ್​ ಬ್ಯಾಟರಿ ನುಂಗಿದ ರಿಶಿಕೇಶ್​ ಎಂಬ ಎರಡು ವರ್ಷದ ಮಗು. ತುರ್ತು ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಪ್ರಾಣ ಉಳಿಸಿದ ವೈದ್ಯರು.

ಆಟವಾಡುತ್ತಾ ಟಿವಿ ರಿಮೋಟ್​ ಬ್ಯಾಟರಿ ನುಂಗಿದ ಎರಡು ವರ್ಷದ ಮಗು; ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ
child-swallowed-tv-remote-battery-while-playing-successful-surgery-by-dr

By

Published : Dec 19, 2022, 12:37 PM IST

ತಿರುವನಂತಪುರಂ:ಆಟವಾಡುವಾಗ ಟಿವಿ ರಿಮೋಟ್​​ ಬ್ಯಾಟರಿ ನುಂಗಿದ ಎರಡು ವರ್ಷದ ಮಗುವಿನ ಪ್ರಾಣವನ್ನು ಇಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ತುರ್ತು ಚಿಕಿತ್ಸೆ ನಡೆಸಿ ಬದುಕಿಸಿದ್ದಾರೆ. ಮಗುವಿನ ಹೊಟ್ಟೆಯಲ್ಲಿದ್ದ ಬ್ಯಾಟರಿಯನ್ನು ಸಕಾಲಕ್ಕೆ ಎಂಡೋಸ್ಕೋಪಿ ನಡೆಸುವ ಮೂಲಕ ಹೊರ ತೆಗೆಯಲಾಗಿದೆ ಎಂದು ಎನ್​ಐಎಂಎಸ್​ ಆಸ್ಪತ್ರೆಯ ವೈದ್ಯ ಜಯಕುಮಾರ್​ ತಿಳಿಸಿದ್ದಾರೆ.

ರಿಶಿಕೇಶ್​ ಎಂಬ ಎರಡು ವರ್ಷದ ಮಗು ಆಟವಾಡುವಾಗ ಟಿವಿ ರಿಮೋಟ್​​ ಬ್ಯಾಟರಿಯನ್ನು ನುಂಗಿದೆ. ಪೋಷಕರು ತಕ್ಷಣಕ್ಕೆ ಮನೆಯ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಕ್ಷಣಕ್ಕೆ ಏನಾಯಿತು ಎಂದು ತಿಳಿದು ಜಾಗೃತರಾದ ನಾವು ಆಪರೇಷನ್​ ಥಿಯೇಟರ್​ಗೆ ಮಗುವನ್ನು ಕೊಂಡೊಯ್ದೆವು. ಮಗುವಿಗೆ ಅರವಳಿಕೆ ನೀಡಿ, 20 ನಿಮಿಷದೊಳಗೆ ಹೊಟ್ಟೆ ಸೇರಿದ ಬ್ಯಾಟರಿಯನ್ನು ಹೊರತೆಗೆದೆವು.

ಮಗು ಸುರಕ್ಷಿತವಾಗಿದ್ದು, ಆರೋಗ್ಯವಾಗಿದೆ. ಒಂದೂವರೆ ಸೆ.ಮೀ ಅಗಲ, ಐದು ಸೆ.ಮೀ ಉದ್ದದ ಟಿವಿ ರಿಮೋಟ್ ಬ್ಯಾಟರಿಯನ್ನು ಹೊರ ತೆಗೆಯಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.

ಇದನ್ನೂ ಓದಿ: ಬಾಂಗ್ಲಾ ಮಗುವಿಗೆ ಅಪರೂಪದ ಕಾಯಿಲೆ: ಭಾರತದ ವೈದ್ಯರಿಂದ ಮರುಜೀವ

ABOUT THE AUTHOR

...view details