ಚಂಡೀಗಢ:ಗರ್ಭದಲ್ಲಿರುವ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ತನ್ನ ಮಗುವನ್ನು ಹೊಟ್ಟೆಯಲ್ಲಿದ್ದಾಗಲೇ ದತ್ತು ಪಡೆದಿದ್ದನ್ನು ಆಕ್ಷೇಪಿಸಿ ಪಟಿಯಾಲಾದ ಮಹಿಳೆಯೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಪೀಠ, ಮಗುವನ್ನು ಗರ್ಭದಲ್ಲಿದ್ದಾಗಲೇ ದತ್ತು ಪಡೆಯುವಂತಿಲ್ಲ. ಇದು ಹಿಂದೂ ದತ್ತು ಸ್ವೀಕಾರ ಕಾಯ್ದೆಯ ವಿರುದ್ಧವಾಗಿದೆ ಎಂದು ಹೇಳಿದೆ.
ಈ ಮೊದಲು ಮಹಿಳೆ ಗರ್ಭ ಧರಿಸಿದ್ದಾಗಲೇ ದಂಪತಿಯೊಬ್ಬರು ಮಗುವನ್ನು ದತ್ತು ಪಡೆಯಲು ಕೋರಿದ್ದರು. ಇದಕ್ಕೆ ಸಮ್ಮತಿಸಿದ್ದ ಮಹಿಳೆ, ಬಳಿಕ ನಿರ್ಧಾರ ಬದಲಿಸಿ ಮಗುವನ್ನು ತನಗೆ ವಾಪಸ್ ನೀಡಬೇಕು ಎಂದು ಕೋರಿದ್ದರು.