ವಾರಣಾಸಿ(ಉತ್ತರ ಪ್ರದೇಶ):ಚಲಿಸುತ್ತಿದ್ದ ರೈಲಿನಿಂದ 3 ವರ್ಷದ ಮಗು ಹೊರಬಿದ್ದಿದೆ. ತಕ್ಷಣ ಮಗುವನ್ನು ರಕ್ಷಿಸಲು ತಂದೆ ಹಾರಿದ್ದಾರೆ. ಈ ದುರಂತದಲ್ಲಿ ತಂದೆ-ಮಗಳು ಇಬ್ಬರೂ ಮೃತಪಟ್ಟಿದ್ದಾರೆ. ಮಿರ್ಜಾಮುರಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿಗಳ ಪ್ರಕಾರ, 32 ವರ್ಷದ ಹೀರಾ ರೈನ್ ತನ್ನ ಪತ್ನಿ ಜರೀನಾ, ಮಗಳು ಮತ್ತು ಸೋದರ ಮಾವ ಫಿರೋಜ್ ಅವರೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಕಿಕ್ಕಿರಿದು ತುಂಬಿದ್ದರಿಂದ ಸೀಟು ಸಿಗದೇ ಬಾಗಿಲ ಬಳಿಯೇ ಕುಳಿತಿದ್ದರು. ಈ ವೇಳೆ ಮಗು ರೈಲಿನಿಂದ ಬಿದ್ದಿದ್ದು, ಹೀರಾ ರೈನ್ ತಕ್ಷಣ ಆಕೆಯನ್ನು ರಕ್ಷಿಸಲು ಹೊರಗೆ ಹಾರಿದ್ದಾರೆ. ಇದನ್ನು ಗಮನಿಸಿದ ಹೆಂಡತಿ ತಕ್ಷಣವೇ ಟ್ರೈನ್ ಚೈನ್ ಎಳೆದು ರೈಲು ನಿಲ್ಲಿಸಿದರು.