ಜಂಜಗೀರ್ ಚಂಪಾ(ಛತ್ತೀಸ್ಗಢ): ಜಂಜಗೀರ್ ಚಂಪಾದ ಮಲ್ಖರೋಡಾದ ಪಿಹ್ರಿದ್ ಗ್ರಾಮದಲ್ಲಿ 12 ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಬಾಲಕ ತನ್ನ ಮನೆಯ ಹಿಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಕುಟುಂಬಸ್ಥರು ಮಗುವನ್ನು ಹುಡುಕಲು ಹೋದಾಗ ಬೋರ್‌ವೆಲ್‌ನಿಂದ ಮಗುವಿನ ಧ್ವನಿ ಕೇಳಿಸಿದೆ.
ತಕ್ಷಣವೇ ಕುಟುಂಬಸ್ಥರು 112ಕ್ಕೆ ಫೋನ್ ಮಾಡಿ ಬಾಲಕ ಬೋರ್‌ವೆಲ್‌ಗೆ ಬಿದ್ದಿರುವ ಮಾಹಿತಿ ನೀಡಿದ್ದಾರೆ. ಹೀಗೆ ಆಟವಾಡುತ್ತಾ ಬೋರ್‌ವೆಲ್‌ಗೆ ಬಿದ್ದಿರುವ ಮಗುವನ್ನ ರಾಹುಲ್ ಸಾಹು ಎಂದು ಗುರುತಿಸಲಾಗಿದೆ.
ಮಗು ಕೊಳವೆ ಬಾವಿಗೆ ಬಿದ್ದಿದ್ದು ಹೀಗೆ: ಪಿಹ್ರಿದ್ ಗ್ರಾಮದ 12 ವರ್ಷದ ರಾಹುಲ್ ಸಾಹು ಮಧ್ಯಾಹ್ನ ಎಂದಿನಂತೆ ಮನೆಯ ಹಿಂಬದಿ ಆಟವಾಡುತ್ತಿದ್ದ. ಮನೆಯವರು ಹುಡುಕಿಕೊಂಡು ಬಂದಾಗ ರಾಹುಲ್ ಅಳುವ ಸದ್ದು ಬರುತ್ತಿತ್ತು. ಕೊಳವೆ ಬಾವಿ ಬಳಿ ಹೋಗಿ ನೋಡಿದಾಗ ಒಳಗಿನಿಂದ ಸದ್ದು ಬರುತ್ತಿರುವುದು ಕಂಡು ಬಂದಿದೆ.