ನಾಗ್ಪುರ: ಇಲ್ಲಿನ ಮನೆಯೊಂದರಲ್ಲಿ ಬಾಲಕಿಯೊಬ್ಬಳು ತನ್ನ ಗೊಂಬೆಯೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಜನ್ ನೀಲೇಶ್ ಸಿಹಿರಿಯಾ (ವಯಸ್ಸು 4) ಮೃತಪಟ್ಟ ಬಾಲಕಿ.
ಘಟನೆಯ ವಿವರ:ಮನೆಯಲ್ಲಿ ಇಲಿಗಳು ವಿಪರೀತ ಉಪಟಳ ನೀಡುತ್ತಿದ್ದವು. ಇದನ್ನು ತಡೆಯಲಾರದೆ ತಾಯಿ ಮನೆಯಲ್ಲಿ ಪಾಷಾಣ ಇಟ್ಟಿದ್ದರು. ಗೊಂಬೆಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಅದನ್ನು ನೋಡಿ ಚಾಕೋಲೇಟ್ ಆಗಿರಬೇಕೆಂದು ತಿಳಿದು ಸೇವಿಸಿದ್ದಾಳೆ. ನಂತರ ಆಕೆ ಅಸ್ವಸ್ಥಗೊಂಡಳು. ಅದೇ ಸಮಯದಲ್ಲಿ ವಾಂತಿ ಮಾಡಿಕೊಂಡಿದ್ದಾಳೆ.