ಕರ್ನಾಟಕ

karnataka

ETV Bharat / bharat

ಮುಗ್ಧ ಮಗುವನ್ನು ರಾಕ್ಷಸನ ಹಾಗೆ ಥಳಿಸಿದ ಕ್ರೂರಿ : ವಿಡಿಯೋ ಭಯಾನಕ - ಮುಗ್ಧ ಮಗುವನ್ನು ರಾಕ್ಷಸನ ಹಾಗೆ ಥಳಿಸಿದ ಕ್ರೂರಿ

ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವ ಯುವಕ ಆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಆತನ ಹೆಸರು ಪ್ರೊಸೆನ್‌ಜಿತ್ ಮಂಡಲ್ ಎನ್ನಲಾಗಿದೆ. ಮಂಡಲ್ ಮೂಲತಃ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ನಂದಿನದಾಹ ಗ್ರಾಮದವನಾಗಿದ್ದಾನೆ. ಇನ್ನು ಥಳಿತಕ್ಕೊಳಗಾದ ಬಾಲಕನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ..

Child abuse video from Hyderabad goes viral
Child abuse video from Hyderabad goes viral

By

Published : Apr 1, 2022, 7:06 PM IST

Updated : Apr 1, 2022, 7:37 PM IST

ಮಾಲ್ಡಾ( ಪ.ಬಂಗಾಳ) :ಹೈದರಾಬಾದ್‌ನಲ್ಲಿ ನಡೆದ ಮಗುವಿನ ಮೇಲಿನ ದೌರ್ಜನ್ಯದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನ ಎಷ್ಟು ಕ್ರೂರಿಗಳು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮೂರೂವರೆ ನಿಮಿಷಗಳ ವಿಡಿಯೋದಲ್ಲಿ ಯುವಕನೊಬ್ಬ ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವುದು ಕಂಡು ಬಂದಿದೆ.

ಮಗುವನ್ನು ನಿರ್ದಯವಾಗಿ ಥಳಿಸಿ, ನಂತರ ಹಗ್ಗಗಳಿಂದ ಬಿಗಿದು ತಲೆಕೆಳಗಾಗಿ ನೇತು ಹಾಕಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಕುತ್ತಿಗೆಗೆ ನೇತಾಡುವ ಭಾರವಾದ ವಸ್ತುಗಳನ್ನು ಕಟ್ಟುತ್ತಾನೆ. ಹಾಗೆ ಕಿವಿಗಳನ್ನು ಹಿಡಿದುಕೊಂಡು ಕುಕ್ಕರು ಬಡಿಯುವ ಶಿಕ್ಷೆ ನೀಡಿದ್ದಾನೆ. ಆ ವೇಲೆ ಮನಬಂದತೆ ಥಳಿಸಿದ್ದಾನೆ. ಸ್ಥಳದಲ್ಲಿದ್ದ ಇಬ್ಬರು ಯುವಕರು ಬಾಲಕನನ್ನು ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವುದು ಸಹ ವಿಡಿಯೋದಲ್ಲಿ ಕಂಡು ಬಂದಿದೆ.

ಮುಗ್ಧ ಮಗುವನ್ನು ರಾಕ್ಷಸನ ಹಾಗೆ ಥಳಿಸಿದ ಕ್ರೂರಿ : ವಿಡಿಯೋ ಭಯಾನಕ

ಇದನ್ನೂ ಓದಿ:ಅಮಿತ್ ಶಾ ಸಂಚರಿಸಿದ ರಸ್ತೆ ಬದಿಯಲ್ಲಿ ಶಾರ್ಟ್ ಸರ್ಕ್ಯೂಟ್: ಕೆಲಕಾಲ ಜನರಲ್ಲಿ ಆತಂಕ

ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎನ್ನಲಾಗಿದೆಯಾದರೂ ಮಾಲ್ಡಾದ ಬಮಂಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡಿದೆ. ಜನ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ.

ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವ ಯುವಕ ಆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಆತನ ಹೆಸರು ಪ್ರೊಸೆನ್‌ಜಿತ್ ಮಂಡಲ್ ಎನ್ನಲಾಗಿದೆ. ಮಂಡಲ್ ಮೂಲತಃ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ನಂದಿನದಾಹ ಗ್ರಾಮದವನಾಗಿದ್ದಾನೆ. ಇನ್ನು ಥಳಿತಕ್ಕೊಳಗಾದ ಬಾಲಕನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Last Updated : Apr 1, 2022, 7:37 PM IST

ABOUT THE AUTHOR

...view details