ಕರ್ನಾಟಕ

karnataka

ETV Bharat / bharat

ಉತ್ತರಪ್ರದೇಶ ಚುನಾವಣೆ: ಹಕ್ಕು ಚಲಾಯಿಸಿ ಈ ವಿಶ್ವಾಸ ವ್ಯಕ್ತಪಡಿಸಿದ ಯೋಗಿ ಆದಿತ್ಯನಾಥ! - ಗೋರಖ್​ಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಮತದಾನ

ಉತ್ತರಪ್ರದೇಶ ವಿಧಾನಸಭೆಗೆ 6 ನೇ ಹಂತದ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್​ನಾಥ್​ ದೇವಾಲಯದಲ್ಲಿ ಪೂಣೆ ಸಲ್ಲಿಸಿ, ಬೆಳಗ್ಗೆ 7 ಗಂಟೆಗೆ ಗೋರಖ್​ಪುರ ಕ್ಷೇತ್ರದಲ್ಲಿನ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

yogi-adityanath
ಯೋಗಿ ಆದಿತ್ಯನಾಥ್

By

Published : Mar 3, 2022, 9:34 AM IST

ಗೋರಖ್‌ಪುರ: ಉತ್ತರಪ್ರದೇಶ ವಿಧಾನಸಭೆಗೆ 6 ನೇ ಹಂತದ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್​ನಾಥ್​ ದೇವಾಲಯದಲ್ಲಿ ಪೂಣೆ ಸಲ್ಲಿಸಿ, ಬೆಳಗ್ಗೆ 7 ಗಂಟೆಗೆ ಗೋರಖ್​ಪುರ ಕ್ಷೇತ್ರದಲ್ಲಿನ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಮಹತ್ವದ ಘಟ್ಟದಲ್ಲಿದೆ. ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಅಭಿವೃದ್ಧಿಯನ್ನು ಜನರು ಮೆಚ್ಚಿದ್ದಾರೆ. ಈ ಬಾರಿ ಶೇ.80ರಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರ ರಚನೆ ಮಾಡಲಿದೆ. ಅಭಿವೃದ್ಧಿ ಎಂದರೆ ಬಿಜೆಪಿ ಎಂದು ಹೇಳಿದರು.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಾರೆ ಎಂಬ ನಂಬಿಕೆ ನನಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ದಾಖಲೆ ನಿರ್ಮಿಸಲಿದೆ. ಶೇ.80 ಸ್ಥಾನಗಳನ್ನು ಗೆಲ್ಲುತ್ತೇವೆ. ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಿಜೆಪಿಗೆ ಮತ ನೀಡಿ ಎಂದರು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಟ್ವೀಟ್​:ಉತ್ತರಪ್ರದೇಶದ 6ನೇ ಹಂತದ ಮತದಾನದಲ್ಲಿ ಎಲ್ಲರೂ ಭಾಗವಹಿಸಲು ಕೋರಿ ಮೋದಿ ಟ್ವೀಟ್​ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ಇಂದು ಆರನೇ ಹಂತಕ್ಕೆ ಪ್ರವೇಶಿಸಿದೆ. ಎಲ್ಲ ಮತದಾರರು ಈ ಉತ್ಸವದಲ್ಲಿ ಭಾಗವಹಿಸಿ ತಪ್ಪದೇ ತಮ್ಮ ಮತ ಹಾಕಿ. ನಿಮ್ಮ ಒಂದು ಮತ, ಪ್ರಜಾಪ್ರಭುತ್ವದ ಶಕ್ತಿ ಎಂದು ಬರೆದುಕೊಂಡಿದ್ದಾರೆ.

ಭ್ರಷ್ಟಾಚಾರ ಮತ್ತು ಕುಟುಂಬವಾದದಿಂದ ಮುಕ್ತವಾದ ಬಲಿಷ್ಠ ಸರ್ಕಾರ ರಚನೆ ಮಾತ್ರ ಉತ್ತರ ಪ್ರದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಸಾಧ್ಯ. ರಾಜ್ಯವನ್ನು ಅಭಿವೃದ್ಧಿಯ ಮುಂಚೂಣಿಯಲ್ಲಿಡಲು ಎಲ್ಲರೂ ಮತ ಚಲಾಯಿಸಿ ಎಂದು ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.

ಓದಿ:ಉತ್ತರಪ್ರದೇಶ ಚುನಾವಣೆ: ಇಂದು 6ನೇ ಹಂತದ ಮತದಾನ..ಸಿಎಂ ಯೋಗಿ, ಮಾಜಿ ಸಚಿವ ಪ್ರಸಾದ್​ ಮೌರ್ಯ ಅದೃಷ್ಟ ಪರೀಕ್ಷೆ

ABOUT THE AUTHOR

...view details