ಚೆನ್ನೈ(ತಮಿಳುನಾಡು): ಮುಖ್ಯಮಂತ್ರಿ ಸ್ಟಾಲಿನ್ ಅವರು ತಮಿಳುನಾಡು ಹೌಸಿಂಗ್ ಬೋರ್ಡ್‌ನ ಹೈ ಇನ್‌ಕಮ್ ಗ್ರೂಪ್ ಫ್ಲಾಟ್‌ನಲ್ಲಿ ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರ ತಂದೆ ಕುಮಾರಿ ಅನಂತನ್ ಅವರಿಗೆ ಮನೆ ಮಂಜೂರು ಮಾಡಿದ್ದಾರೆ.
ಕುಮಾರಿ ಅನಂತನ್ ಅವರು ಕನ್ಯಾಕುಮಾರಿಯ ಕುಮಾರಿಮಂಗಳಂನ ಸ್ವಾತಂತ್ರ್ಯ ಹೋರಾಟಗಾರ ಅರಿಕ್ರಿಟ್ಟಿನನ್- ತಂಗಮ್ಮಾಳ್ ದಂಪತಿಯ ಪುತ್ರ. ಅವರು ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಒಮ್ಮೆ ಸಂಸತ್ ಸದಸ್ಯರಾಗಿ ಮತ್ತು ತಮಿಳುನಾಡು ತಾಳೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.