ಅಲಿರಾಜಪುರ(ಮಧ್ಯಪ್ರದೇಶ):ಬುಡಕಟ್ಟು ಜನಾಂಗದ ನಾಲ್ವರ ಕನಸು ಕೊನೆಗೂ ನನಸಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧಿಕೃತವಾಗಿ ಬಳಕೆ ಮಾಡುತ್ತಿದ್ದ ಹೆಲಿಕಾಪ್ಟರ್ನಲ್ಲಿ ಅರ್ಧಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.
ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬೋಬತ್ ತಹಸಿಲ್ನ ಬುಡಕಟ್ಟು ಕುಟುಂಬದ ನಾಲ್ವರು ಆದಿವಾಸಿಗಳಾದ ದರಿಯವ್ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್ ಸಿಎಂ ಬಳಕೆ ಮಾಡುತ್ತಿದ್ದ ಅಧಿಕೃತ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡಿದರು. ಇವರು ರಣಬೈಡಾದಿಂದ ಸೇಜವಾಡದವರೆಗೆ ಈ ಹೆಲಿಕಾಪ್ಟರ್ನಲ್ಲಿ ತೆರಳಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕ್ಷೇತ್ರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಚೌಹಾಣ್, ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಆದಿವಾಸಿ ಕ್ಷೇತ್ರ ಜೋಬತ್ನಲ್ಲಿ ಉಪಚುನಾವಣೆ ನಡೆಯಬೇಕಾಗಿದ್ದ ಕಾರಣ, ಸಿಎಂ ಈ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು.