ನಂದಿಗ್ರಾಮ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ ಪ್ರಚಾರ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದು, ಹಲ್ಲೆ ಆರೋಪ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕಾಲಿಗೆ ಗಾಯ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಮಮತಾ, ತದನಂತರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇಂದು ರಾತ್ರಿ ನಂದಿಗ್ರಾಮದಲ್ಲಿ ಉಳಿದುಕೊಂಡು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಉದ್ದೇಶವನ್ನು ಅವರು ಇಟ್ಟುಕೊಂಡಿದ್ದರು. ಆದರೆ ಕಾರು ಹತ್ತಲು ಹೋಗುತ್ತಿದ್ದ ವೇಳೆ ಅವರನ್ನು ಹಿಂದಿನಿಂದ ಕೆಲವರು ತಳ್ಳಿದ್ದಾರೆ ಎನ್ನಲಾಗಿದ್ದು, ಕಾಲಿಗೆ ಗಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದೀದಿಗೆ ಶಾಕ್ ಮೇಲೆ ಶಾಕ್: ಬಿಜೆಪಿ ಸೇರಿದ ಟಿಎಂಸಿ ಸಚಿವ ಹಾಗೂ ಶಾಸಕ!
ಮಮತಾ ಇದೀಗ ಚುನಾವಣಾ ಪ್ರಚಾರ ಮೊಟಕುಗೊಳಿಸಿ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಲು ಮುಂದಾಗಿದೆ.
ಪ್ರತಿಕ್ರಿಯೆ ನೀಡಿದ ಬಿಜೆಪಿ:ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಬಿಜೆಪಿ, ಅವರ ಮೇಲೆ ತಾಲಿಬಾನ್ ದಾಳಿ ನಡೆಸಿದೆಯೇ?, ಸಾಕಷ್ಟು ಭದ್ರತಾ ಸಿಬ್ಬಂದಿ ಅವರ ಸುತ್ತಲೂ ಇರುವಾಗ, ಜನಸಾಮಾನ್ಯರು ಹತ್ತಿರ ಹೋಗಲು ಹೇಗೆ ಸಾಧ್ಯ?. ನಾಲ್ವರು ಐಪಿಎಸ್ ಅಧಿಕಾರಿಗಳು ಆಕೆಗೆ ಭದ್ರತೆ ನೀಡಿದ್ದಾರೆ. ಇದೀಗ ಅವರನ್ನು ಅಮಾನತು ಮಾಡಬೇಕು. ಸಹಾನುಭೂತಿಗೋಸ್ಕರ ಅವರು ಈ ರೀತಿಯ ನಾಟಕವಾಡಿದ್ದಾರೆಂದು ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ.