ಕರ್ನಾಟಕ

karnataka

ETV Bharat / bharat

ಶ್ರೀಶೈಲಂ ದೇವಾಲಯಕ್ಕೆ ಭೇಟಿ ನೀಡಿದ ಸಿಜೆಐ ಎನ್ ವಿ ರಮಣ - JUSTICE NV RAMANA VISIT SRISAILAM TEMPLE

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಸಿಜೆಐ ಆದ ನಂತರ ಇದೇ ಮೊದಲ ಬಾರಿಗೆ ಶ್ರೀಶೈಲಂಗೆ ಭೇಟಿ ನೀಡಿದ್ದು, ವೈದಿಕ ವಿದ್ವಾಂಸರು ದಂಪತಿಯನ್ನು ಆಶೀರ್ವದಿಸಿ, ತೀರ್ಥ ಪ್ರಸಾದವನ್ನು ನೀಡಿದ್ದಾರೆ..

chief-justice-of-india-justice-nv-ramana-visit-srisailam-temple
ವೈದಿಕ ವಿದ್ವಾಂಸರು ದಂಪತಿಗಳನ್ನು ಆಶೀರ್ವದಿಸಿ, ತೀರ್ಥ ಪ್ರಸಾದವನ್ನು ನೀಡಿದರು

By

Published : Jun 18, 2021, 4:06 PM IST

ಆಂಧ್ರಪ್ರದೇಶ :ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ಅವರ ಪತ್ನಿ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಭರಾಮರಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನ್ಯಾಯಮೂರ್ತಿ ರಮಣ ದಂಪತಿ ಹೈದರಾಬಾದ್‌ ಮೂಲಕ ಶ್ರೀಶೈಲಂ ತಲುಪಿದರು. ದೇವಾಲಯಕ್ಕೆ ಆಗಮಿಸಿದ ನ್ಯಾಯಮೂರ್ತಿಗಳನ್ನು ನಾಧಿ ನಿಕೇತನ್ ಅತಿಥಿ ಗೃಹದಲ್ಲಿ ಆಂಧ್ರಪ್ರದೇಶದ ದತ್ತಿ ಸಚಿವರು ಸ್ವಾಗತಿಸಿದರು.

ಶ್ರೀಶೈಲಂ ದೇವಾಲಯಕ್ಕೆ ಭೇಟಿ ನೀಡಿದ ಸಿಜೆಐ ಎನ್ ವಿ ರಮಣ

ದೇವಾಲಯದ ಅಧಿಕಾರಿಗಳು ಸಿಜೆಐ ಅವರನ್ನು ದೇವಸ್ಥಾನದ ಮುಂಭಾಗದಲ್ಲಿ ಸ್ವಾಗತಿಸಿದ್ದು, ಅರ್ಚಕರು ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರು. ಇದಾದ ನಂತರ ಶ್ರೀಶೈಲಂ ಭರಾಮರಂಬ ಮಲ್ಲಿಕಾರ್ಜುನ ಸ್ವಾಮಿಗೆ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ವೈದಿಕ ವಿದ್ವಾಂಸರು ಎನ್.ವಿ.ರಮಣ ದಂಪತಿಯನ್ನು ಆಶೀರ್ವದಿಸಿ, ತೀರ್ಥ ಪ್ರಸಾದವನ್ನು ನೀಡಿದರು.

ನಂತರ ದಂಪತಿ ಶ್ರೀಶೈಲಂ ಘಂಟಮಠದಲ್ಲಿನ ಪ್ರಾಚೀನ ತಾಮ್ರ ಶಾಸನಗಳನ್ನು ನೋಡಲು ಭೇಟಿ ಮಾಡಿದರು. ನ್ಯಾಯಮೂರ್ತಿಗಳೊಂದಿಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ರಾಜೇಶ್ ಕುಮಾರ್ ಗೋಯಲ್ ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದರು. ನ್ಯಾಯಮೂರ್ತಿ ಎನ್‌ವಿ ರಮಣ ಸಿಜೆಐ ಆದ ನಂತರ ಇದೇ ಮೊದಲ ಬಾರಿಗೆ ಶ್ರೀಶೈಲಂಗೆ ಭೇಟಿ ನೀಡಿದ್ದಾರೆ.

ಓದಿ:ಡೋಂಟ್​ ವರಿ... WHO-AIIMS ಸಿರೊಪ್ರೆವೆಲೆನ್ಸ್ ಸಮೀಕ್ಷೆಯ ಫಲಿತಾಂಶ ಸಕಾರಾತ್ಮಕ: ಗುಲೇರಿಯಾ

ABOUT THE AUTHOR

...view details