ನವದೆಹಲಿ:ದೇಶದ 75ನೇ ವರ್ಷದ ಸಂಭ್ರಮಾಚರಣೆಯ ಮೊದಲ ಡಿಜಿಟಲ್ ಪೋಸ್ಟರ್‌ನಿಂದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಐಸಿಹೆಚ್‌ಆರ್ ನೀಡಿರುವ ವಿವರಣೆ ಹಾಸ್ಯಾಸ್ಪದ ಎಂದಿದ್ದಾರೆ.
'ಆಜಾದಿ ಕಾ ಅಮೃತ್ ಮಹೋತ್ಸವ್' ಡಿಜಿಟಲ್ ಪೋಸ್ಟರ್‌ನಿಂದ ನೆಹರು ನಾಪತ್ತೆ; ಚಿದಂಬರಂ ಕಿಡಿ - ಕಾಂಗ್ರೆಸ್
ಸ್ವಾತಂತ್ರದ 75ನೇ ವರ್ಷದ ಸಂಭ್ರಮಾಚರಣೆಯ ಮೊದಲ ಡಿಜಿಟಲ್ ಪೋಸ್ಟರ್‌ನಿಂದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಚಿತ್ರವನ್ನು ಹಾಕದಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಆಜಾದಿಕಾ ಅಮೃತ್ ಮಹೋತ್ಸವ' ಡಿಜಿಟಲ್ ಪೋಸ್ಟರ್‌ನಿಂದ ನೆಹರು ಫೋಟೋ ನಾಪತ್ತೆ; ಐಸಿಹೆಚ್‌ಆರ್ ವಿರುದ್ಧ ಚಿದಂಬರಂ ಆಕ್ರೋಶ
ಐಸಿಹೆಚ್‌ಆರ್ ಸದಸ್ಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ದ್ವೇಷ ಮತ್ತು ಪೂರ್ವಾಗ್ರಹಕ್ಕೆ ನೀವು ತಲೆಬಾಗುತ್ತೀರಿ ಎಂದು ಆರೋಪಿಸಿದ್ದಾರೆ.
ಕಾರಿನ ಜನ್ಮದಿನವನ್ನು ಆಚರಿಸುವಾಗ ಹೆನ್ರಿ ಫೋರ್ಡ್, ವಾಯುಯಾನದ ಹುಟ್ಟುಹಬ್ಬ ಆಚರಿಸುವಾಗ ರೈಟ್ ಸಹೋದರರನ್ನು ಮರೆಯುತ್ತಾರೆಯೇ?, ಭಾರತೀಯ ವಿಜ್ಞಾನ ದಿನವನ್ನು ಆಚರಿಸುವಾಗ ಸಿ.ವಿ.ರಾಮನ್ ಅವರನ್ನು ಬಿಟ್ಟುಬಿಡುತ್ತಾರೆಯೇ? ಎಂದು ಟ್ವೀಟ್ ಮಾಡಿದ್ದಾರೆ.