ನವದೆಹಲಿ :ಕೇಂದ್ರ ಸರ್ಕಾರ ತಮ್ಮ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ರೈತರನ್ನು ಶತ್ರುಗಳಂತೆ ನೋಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕಿಡಿಕಾರಿದ್ದಾರೆ. ಆರ್ಥಿಕ ಹಿಂಜರಿತದ ವರ್ಷದಲ್ಲಿಯೂ ಶೇ.3.9ರಷ್ಟು ಬೆಳವಣಿಗೆ ಸಾಧಿಸಿದರುವ ಕೃಷಿ ಕ್ಷೇತ್ರ ಕುರಿತು ಪ್ರತಿಭಟಿಸುತ್ತಿವವರನ್ನು ಶತ್ರುಗಳಂತೆ ನೋಡುವುದು ಸರಿಯಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಕೇರಳದಿಂದ ಅಸ್ಸೋಂವರೆಗೂ ಪ್ರವಾಸ ಕೈಗೊಳ್ಳಲು ಸಮಯವಿದೆ. ಆದರೆ, 20 ಕಿ.ಮೀ ದೂರದಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗುತ್ತಿಲ್ಲ ಎಂದಿದ್ದಾರೆ. ಶೇ.6ರಷ್ಟು ರೈತರು ಮಾತ್ರ ಬೆಂಬಲ ಬೆಲೆಯ ಫಲಾನುಭವಿಗಾಗಿದ್ದಾರೆ. ಮೊದಲು ಅವರು ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.