ಕರ್ನಾಟಕ

karnataka

ETV Bharat / bharat

ಕೋವಾಕ್ಸಿನ್​ ತಯಾರಕರ ಆಹ್ವಾನಿಸುವಲ್ಲಿ ಕೇಂದ್ರ ಸರ್ಕಾರದಿಂದ 4 ವಾರಗಳ ವಿಳಂಬ : ಪಿ ಚಿದಂಬರಂ

ಲಸಿಕೆ ಕೊರತೆ ಬೆನ್ನಲ್ಲೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಲಸಿಕಾ ತಯಾರಿಕಾ ಕಂಪನಿಗಳನ್ನ ಆಹ್ವಾನಿಸುವಲ್ಲಿ ಕೇಂದ್ರ 4 ವಾರಗಳ ವಿಳಂಬ ಮಾಡಿದೆ ಎಂದು ಆರೋಪಿಸಿದ್ದಾರೆ..

ಪಿ ಚಿದಂಬರಂ
ಪಿ ಚಿದಂಬರಂ

By

Published : May 15, 2021, 3:45 PM IST

ನವದೆಹಲಿ : ದೇಶದಲ್ಲಿ ಲಸಿಕೆ ಕೊರತೆ ವಿರುದ್ಧ ವಿಪಕ್ಷಗಳ ಟೀಕೆ ಮುಂದುವರಿದಿದೆ. ಇದೀಗ ಮಾಜಿ ಸಚಿವ ಪಿ.ಚಿದಂಬರಂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋವಾಕ್ಸಿನ್ ಉತ್ಪಾದಿಸಲು ಇತರ ಲಸಿಕೆ ತಯಾರಕರನ್ನು ಆಹ್ವಾನಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದ್ದು, ಈಗ ಸಂಭವಿಸುತ್ತಿರುವ ಸೋಂಕುಗಳು ಮತ್ತು ಪ್ರಾಣಹಾನಿಗೆ ಯಾರು ಹೊಣೆಗಾರರಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ನಿರ್ಧಾರ ಕೈಗೊಳ್ಳುವ 4 ವಾರಗಳ ಮೊದಲೇ ಲಸಿಕೆ ಉತ್ಪಾದಕರಿಗೆ ಪರವಾನಿಗೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿತ್ತು ಎಂದು ಸರಣಿ ಟ್ವೀಟ್​​​​ನಲ್ಲಿ ಚಿದಂಬರಂ ಹೇಳಿದ್ದಾರೆ.

ಅಲ್ಲದೆ ಕಾಂಗ್ರೆಸ್ 4 ವಾರಗಳ ಮೊದಲು ಸಭೆಯಲ್ಲಿ ಆಗ್ರಹಿಸಿದ್ದಂತೆ ಈಗ ಲಸಿಕೆ ತಯಾರಕರನ್ನು ಆಹ್ವಾನಿಸಲು ಕೇಂದ್ರ ನಿರ್ಧರಿಸಿದೆ ಎಂದಿದ್ದಾರೆ.

ಆದರೆ, 4 ವಾರಗಳ ವಿಳಂಬದಿಂದಾಗಿ ತಪ್ಪಿಸಬಹುದುದಾಗಿದ್ದ ಸೋಂಕುಗಳು ಹಾಗೂ ಸಾವಿಗೆ ಯಾರು ಹೊಣೆಯಾಗಲಿದ್ದಾರೆ? ದೇಶೀಯ ಉತ್ಪಾದನೆ ಮತ್ತು ಬೇಡಿಕೆ ನಡುವಿನ ದೊಡ್ಡ ಅಂತರದ ಗಣಿತ ಮಾಡಿದವರು ಯಾರು? ಎಂದು ಟೀಕಿಸಿದ್ದಾರೆ. ಅಲ್ಲದೆ ದೇಶದ ಜನರಿಗೆ ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ತೌಕ್ತೆ ಸೈಕ್ಲೋನ್​: ಅಗತ್ಯವಿರುವವರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರಿಗೆ ರಾಗಾ ಮನವಿ

ABOUT THE AUTHOR

...view details