ಕರ್ನಾಟಕ

karnataka

ETV Bharat / bharat

ಗತಿಮಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್ ಪೀಸ್ ಪತ್ತೆ! ಉದ್ಯೋಗಿ ಅಮಾನತು - ಆರ್ ಕೆ ಗತಿಮಾನ್ ಎಕ್ಸ್‌ಪ್ರೆಸ್‌

ಸಸ್ಯಾಹಾರ ಊಟದ ಬದಲಿಗೆ ಮಾಂಸಾಹಾರ ನೀಡಿದ ಘಟನೆಯ ಹಿನ್ನೆಲೆಯಲ್ಲಿ ಐಆರ್​ಸಿಟಿಸಿ ಒಬ್ಬ ಉದ್ಯೋಗಿಯನ್ನು ಅಮಾನತುಗೊಳಿಸಿದೆ.

ಗತಿಮಾನ್ ಎಕ್ಸ್‌ಪ್ರೆಸ್‌
ಗತಿಮಾನ್ ಎಕ್ಸ್‌ಪ್ರೆಸ್‌

By

Published : Jun 26, 2023, 10:22 PM IST

Updated : Jun 26, 2023, 11:01 PM IST

ಗ್ವಾಲಿಯರ್ (ಮಧ್ಯಪ್ರದೇಶ) :ಸಸ್ಯಾಹಾರ ಊಟಕ್ಕೆ ಆರ್ಡರ್ ಮಾಡಿದ್ದ ಪ್ರಯಾಣಿಕರಿಗೆ ಮಾಂಸಾಹಾರ ಉಣಬಡಿಸಿದ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ತನ್ನ ಒಬ್ಬ ಉದ್ಯೋಗಿಯನ್ನು ಕೆಲಸದಿಂದ ಅಮಾನತುಗೊಳಿಸಿದೆ. ಅಲ್ಲದೇ ಗುತ್ತಿಗೆ ಪಡೆದಿದ್ದ ಕೇಟರಿಂಗ್ ಕಂಪನಿಗೆ ದಂಡ ವಿಧಿಸಲಾಗಿದೆ.

ಝಾನ್ಸಿಯ ಲಕ್ಷ್ಮೀಬಾಯಿ ರೈಲು ನಿಲ್ದಾಣದಿಂದ ಹಜರತ್ ನಿಜಾಮುದ್ದೀನ್‌ಗೆ ತೆರಳುತ್ತಿದ್ದ ಗತಿಮಾನ್ ಎಕ್ಸ್‌ಪ್ರೆಸ್‌ನಲ್ಲಿ ಶನಿವಾರ ಘಟನೆ ನಡೆದಿದೆ. ಇಬ್ಬರು ಪ್ರಯಾಣಿಕರು ತಾವು ಆರ್ಡರ್ ಮಾಡಿದ ಸಸ್ಯಾಹಾರಿ ಖಾದ್ಯಗಳಲ್ಲಿ ಚಿಕನ್ ತುಂಡುಗಳು ಕಂಡುಬಂದಿವೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ:ಪ್ರಧಾನಿ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಕ್ರಮ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಆಹಾರವನ್ನು ತಯಾರಿಸುವ ಮತ್ತು ಪ್ಯಾಕ್ ಮಾಡುವ ಕಾರ್ಯವು ಗುತ್ತಿಗೆಯಲ್ಲಿ ತೊಡಗಿಸಿಕೊಂಡಿರುವ ಆಹಾರ ವಿತರಣಾ ಕಂಪನಿಯ ಮೇಲಿದೆ ಎಂದು IRCTC ಅಧಿಕಾರಿಗಳು ತಿಳಿಸಿದ್ದಾರೆ. IRCTC ಸರಳವಾಗಿ ಆಹಾರವನ್ನು ಪೂರೈಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Dress code: ಮಹಾರಾಷ್ಟ್ರದ 135 ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ನಿರ್ಧಾರ; ಉತ್ತರ ಪ್ರದೇಶದ ಜೈನಮಂದಿರಗಳಲ್ಲಿ ನಿಯಮ ಜಾರಿ

ಗತಿಮಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತಿವಾರಿ ಮತ್ತು ಅವರ ಪತ್ನಿ ಪ್ರೀತಿ ಸಸ್ಯಾಹಾರಿ ಆಹಾರವನ್ನು ಸೇವಿಸಲು ಬಯಸಿದ್ದರು. "ಚೋಲೆ" (ಕಡಲೆ) ಆರ್ಡರ್ ಮಾಡಿದರು. ರೈಲು ಝಾನ್ಸಿಯಿಂದ ಹೊರಟ ನಂತರ ರೈಲ್ವೆ ಸಿಬ್ಬಂದಿ ತಿವಾರಿ ದಂಪತಿಗೆ ಊಟ ಬಡಿಸಿದರು. ಆದರೆ, ತಟ್ಟೆಯಲ್ಲಿ ಚಿಕನ್ ಪೀಸ್ ಇರುವುದನ್ನು ದಂಪತಿ ನೋಡಿದ್ದಾರೆ. ಆಹಾರದ ವಿಡಿಯೋವನ್ನು ಮಾಡಿದ್ದಾರೆ. ಅದನ್ನು ತಮ್ಮ ಮಗಳಿಗೆ ಕಳುಹಿಸಿದ್ದಾರೆ. ತಕ್ಷಣವೇ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು IRCTC ಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ:Businessman robbed: ಬಂದೂಕು ತೋರಿಸಿ ಉದ್ಯಮಿಯ ದರೋಡೆ, ಕಾರು ಅಡ್ಡಗಟ್ಟಿ 2 ಲಕ್ಷದ ಬ್ಯಾಗ್​ ದೋಚಿದ ಕಳ್ಳರು!

ಗ್ವಾಲಿಯರ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಕೃತಿಕಾ ಮೋದಿ ಎಂಬ ಮತ್ತೊಬ್ಬ ಪ್ರಯಾಣಿಕರು ಪಾಸ್ಟಾ ಮತ್ತು "ಚೋಲೆ-ಕುಲ್ಚೆ" ಆರ್ಡರ್ ಮಾಡಿದ್ದರು. ಆದರೆ ರೈಲ್ವೆ ಸಿಬ್ಬಂದಿ ಕೋಳಿ ಮಾಂಸ ನೀಡಿದ್ದಾರೆ. ಇದನ್ನು ಗಮನಿಸಿದ ಅವರು ನಂತರ ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಮೇಲ್ವಿಚಾರಕರ ಗಮನಕ್ಕೆ ತಂದಾಗ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ಇದು ಕೇಟರಿಂಗ್ ಕಂಪನಿಯ ತಪ್ಪು ಎಂದು ಅವರು ಹೇಳಿದ್ದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಹೋಟೆಲ್‌ನಿಂದ ₹1 ಕೋಟಿ ಪರಿಹಾರ ಕೇಳಿದ ಗ್ರಾಹಕ: ಫುಡ್​ ಡೆಲಿವರಿ ಆ್ಯಪ್​ ಅಥವಾ ಹೋಟೆಲ್​ಗಳಲ್ಲಿ ಫುಡ್​ ಆರ್ಡರ್​ ಮಾಡಿದಾಗ ತಪ್ಪಾದ ಆಹಾರ ಒದಗಿಸಿರುವ ಘಟನೆಗಳು ಸಾಕಷ್ಟು ವರದಿಯಾಗಿವೆ. ಯಾವುದೋ ಗಡಿಬಿಡಿ, ಮತ್ತಿತರ ಕಾರಣದಿಂದಾಗುವ ಇಂತಹ ಅಭಾಸಗಳು ಗ್ರಾಹಕರು ಸಿಟ್ಟಿಗೇಳುವಂತೆ ಮಾಡುತ್ತವೆ. ಈ ಸಂಬಂಧ ಗಲಾಟೆ, ಆಕ್ರೋಶ ಸಹಜ. ಆದರೆ, ಇದಕ್ಕಿಂತ ಭಿನ್ನವಾದ ಪ್ರಕರಣ ಇದೀಗ ವರದಿಯಾಗಿದೆ.

ತಾಜ್​ಮಹಲ್​ನ ಅದ್ಬುತ ಸೌಂದರ್ಯ ಆಹ್ಲಾದಿಸಲು ಬಂದಿಳಿದ ಅತಿಥಿಗೆ ಹೋಟೆಲ್​ನವರು ತಪ್ಪಾದ ಆಹಾರ ನೀಡಿರುವ ಘಟನೆ ( ಏಪ್ರಿಲ್ 21-2023)ರಂದು ನವದೆಹಲಿಯಲ್ಲಿ ನಡೆದಿತ್ತು. ಸಸ್ಯಾಹಾರಿಯಾದ ವ್ಯಕ್ತಿಗೆ ಮಾಂಸಾಹಾರ ನೀಡಲಾಗಿತ್ತು. ಇದರಿಂದ ಉಗ್ರ ಪ್ರತಾಪಿಯಾದ ಗ್ರಾಹಕ ಇದೀಗ 1 ಕೋಟಿ ರೂ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ:Himachal floods: ಹಿಮಾಚಲ ಪ್ರದೇಶದಲ್ಲಿ ಪ್ರವಾಹ: 6 ಸಾವು, ಹೆದ್ದಾರಿಯಲ್ಲಿ ಭೂಕುಸಿತ, ನೂರಾರು ಜನರ ಪರದಾಟ

Last Updated : Jun 26, 2023, 11:01 PM IST

ABOUT THE AUTHOR

...view details