ಕರ್ನಾಟಕ

karnataka

ETV Bharat / bharat

ಗಣೇಶ ನಿಮಜ್ಜನ ಮುಗಿಸಿ ವಾಪಸ್‌ ಬರುತ್ತಿದ್ದ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ - ಅಪ್ರಾಪ್ತೆ ಗ್ಯಾಂಗ್​ರೇಪ್​

ಗಣೇಶ ಮೂರ್ತಿ ನಿಮಜ್ಜನದಲ್ಲಿ ಭಾಗಿಯಾಗಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಅಪ್ರಾಪ್ತೆಯನ್ನು ಅಪಹರಿಸಿರುವ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

Chhattisgarh rape
Chhattisgarh rape

By

Published : Sep 23, 2021, 5:16 PM IST

ಬಲರಾಂಪುರ್​(ಛತ್ತೀಸ್‌ಗಢ):ಅಪ್ರಾಪ್ತೆಯರ ಮೇಲಿನ ಅತ್ಯಾಚಾರದಂತಹ ಹೇಯ ಕೃತ್ಯಗಳು ನಿಲ್ಲುತ್ತಿಲ್ಲ. 14 ವರ್ಷದ ಬಾಲಕಿ ಮೇಲೆ ಇಬ್ಬರು ಬಾಲಕರು ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಛತ್ತೀಸ್​ಗಢದ ಬಲರಾಂಪುರ್​​​​ದಲ್ಲಿ ನಡೆದಿದೆ. ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್​ 19ರಂದು ಈ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಬಾಲಕಿ ಪಕ್ಕದ ಹಳ್ಳಿಯಲ್ಲಿ ಗಣೇಶ ಮೂರ್ತಿ ನಿಮಜ್ಜನೆ ಕಾರ್ಯದಲ್ಲಿ ಪಾಲ್ಗೊಳ್ಳಲು ಬಾಲಕಿ ತೆರಳಿದ್ದಳು. ಅಲ್ಲಿಂದ ಹಿಂದಿರುಗುವ ಮುನ್ನ ಆಕೆಯ ಸ್ನೇಹಿತರು, ಹಳ್ಳಿಯ ಹೊರವಲಯದಲ್ಲಿ ಕಾಯುವಂತೆ ತಿಳಿಸಿದ್ದಾರೆ. ಅಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಬಾಲಕಿ ಏಕಾಂಗಿಯಾಗಿರುವುದನ್ನು ನೋಡಿರುವ ವ್ಯಕ್ತಿಯೋರ್ವ ತನ್ನ ಇತರೆ ನಾಲ್ವರು ಸ್ನೇಹಿತರೊಂದಿಗೆ ಸೇರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಎಲ್ಲರೂ ಸೇರಿಕೊಂಡು ದುಷ್ಕೃತ್ಯವೆಸಗಿದ್ದಾರೆ. ಇದರಲ್ಲಿ ಇಬ್ಬರು ಅಪ್ರಾಪ್ತರು ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:'ಕೋವಿಡ್​​ನಿಂದ ಮೃತಪಟ್ಟವರಿಗೆ 50 ಸಾವಿರ ರೂ ಹಾಸ್ಯಾಸ್ಪದ': 5 ಲಕ್ಷ ಪರಿಹಾರಕ್ಕೆ ಕಾಂಗ್ರೆಸ್​ ಆಗ್ರಹ

ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಎಲ್ಲರೂ ಪರಾರಿಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದುಷ್ಕೃತ್ಯದ ಬಳಿಕ ಬಾಲಕಿಗೆ ಪ್ರಜ್ಞೆ ಬಂದಿದ್ದು ತಂದೆಯ ಸ್ನೇಹಿತನೊಂದಿಗೆ ಮನೆಗೆ ತಲುಪಿದ್ದಾಳೆ. ಘಟನೆ ನಡೆದ ಮರುದಿನ ಪೋಷಕರ ಮುಂದೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಈ ವೇಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಸ್​​ ಹಾಗೂ ಅನುರಾಗ್ ಸಿಂಗ್​ ಸೇರಿದಂತೆ ಇಬ್ಬರು ಅಪ್ರಾಪ್ತರ ಬಂಧನ ಮಾಡಲಾಗಿದ್ದು, ಮತ್ತೋರ್ವನಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಗುಪ್ತಾ ತಿಳಿಸಿದ್ದಾರೆ.

ABOUT THE AUTHOR

...view details