ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢದಲ್ಲಿ ನಕ್ಸಲ್​ ದಾಳಿ: ತೆಲಂಗಾಣದಲ್ಲಿ ಹೈ-ಅಲರ್ಟ್​, ಶೋಧ ಕಾರ್ಯ ಚುರುಕು - ತೆಲಂಗಾಣದಲ್ಲಿ ತೀವ್ರ ಕಟ್ಟೆಚ್ಚರ

ಛತ್ತೀಸ್​ಗಢದಲ್ಲಿ ನಕ್ಸಲ್​ ದಾಳಿ ನಡೆಯುತ್ತಿದ್ದಂತೆ ತೆಲಂಗಾಣದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಕ್ಸಲರು ರಾಜ್ಯ ಪ್ರವೇಶಿಸದಂತೆ ಗಡಿಯಲ್ಲಿ ತಪಾಸಣೆ ಆರಂಭಿಸಲಾಗಿದೆ.

Telangana cops on alert
Telangana cops on alert

By

Published : Apr 5, 2021, 8:10 PM IST

ಹೈದರಾಬಾದ್​(ತೆಲಂಗಾಣ):ಕಳೆದೆರಡು ದಿನಗಳ ಹಿಂದೆ ಛತ್ತೀಸ್​ಗಢದ ಬಿಜಾಪುರದಲ್ಲಿ ನಡೆದ ನಕ್ಸಲ್​​ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಇದರ ಬೆನ್ನಲ್ಲೇ ಪಕ್ಕದ ತೆಲಂಗಾಣದಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ತೀವ್ರ ಕಟ್ಟೆಚ್ಚರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ನಕ್ಸಲ್​ ದಾಳಿಯ ಮಾಸ್ಟರ್​ ಮೈಂಡ್ ಈ​ 'ಹಿಡ್ಮಾ'... ಹುಡುಕಿಕೊಟ್ಟವರಿಗೆ 50 ಲಕ್ಷ ರೂ. ಬಹುಮಾನ

ಭೀಕರ ದಾಳಿ ನಡೆಸಿರುವ ನಕ್ಸಲರು ತೆಲಂಗಾಣ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿರುವ ಕಾರಣ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರಾದ್ರಿ ಕೊಥಗುಡೆಮ್​ ಹಾಗೂ ಮುಲುಗು ಜಿಲ್ಲೆಗಳಲ್ಲಿ ಪೊಲೀಸರು ಮತ್ತು ಭದ್ರತಾ ಪಡೆ ಸಿಬ್ಬಂದಿ ತಪಾಸಣೆ ಹಾಗೂ ಶೋಧ ಕಾರ್ಯ ಆರಂಭಿಸಿದ್ದಾರೆ.

ಬಿಜಾಪುರ ನಕ್ಸಲ್​ ದಾಳಿ ಬೆನ್ನಲ್ಲೇ ತೆಲಂಗಾಣದಲ್ಲಿ ಹೈ-ಅಲರ್ಟ್​​

ಛತ್ತೀಸ್​ಗಢ ಹಾಗೂ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಕಾರಣ ನಕ್ಸಲರು ಇಲ್ಲಿನ ಅರಣ್ಯ ಪ್ರದೇಶದಲ್ಲಿ ಕೆಲ ದಿನಗಳ ಹಾಲ ತಲೆಮರೆಸಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಹೀಗಾಗಿ ಇಲ್ಲಿನ ಅಧಿಕಾರಿಗಳು ಹೈಅಲರ್ಟ್​​ ಆಗಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details