ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ನಲ್ಲಿ ಮನೆ ಬಾಗಿಲಿಗೆ ಮದ್ಯ: ಛತ್ತೀಸ್​ಗಢ ಸರ್ಕಾರದ ನಿರ್ಧಾರ

ಛತ್ತೀಸ್‌ಗಢ ಸರ್ಕಾರ ಆರ್ಥಿಕ ನಷ್ಟವನ್ನು ತಪ್ಪಿಸುವ ಸಲುವಾಗಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ತೆರೆಯಲಾಗಿದೆ.

home delivery of liquor in Chhattisgarh
ಚತ್ತೀಸ್​ಗಢದಲ್ಲಿ ಮದ್ಯ ಹೋಂ ಡೆಲಿವರಿ

By

Published : May 9, 2021, 7:32 AM IST

ಛತ್ತೀಸ್​ಗಢ: ಮೇ 10 ಸೋಮವಾರದಿಂದ ರಾಜ್ಯದಲ್ಲಿ ಮದ್ಯ ಹೋಂ ಡೆಲಿವರಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಅಬಕಾರಿ ಸಚಿವ ಕವಾಸಿ ಲಖ್ಮಾ ತಿಳಿಸಿದ್ದಾರೆ.

ಲಾಕ್‌ಡೌನ್​ನಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ತುಂಬುವ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್​ ಕಾರಣದಿಂದ ಮದ್ಯ ಮಾರಾಟ ಸ್ಥಗಿತಗೊಂಡಿರುವುದರಿಂದ ಸರ್ಕಾರಕ್ಕೆ ಭಾರೀ ಆರ್ಥಿಕ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂಓದಿ : ಖುದ್ದು ರಸ್ತೆಗಳಿದು ನೈಟ್ ಕರ್ಫ್ಯೂ ಪರಿಶೀಲಿಸಿದ ತ್ರಿಪುರ ಸಿಎಂ

ಕೋವಿಡ್ ಪ್ರಕರಣಗಳು ಕಡಿಮೆಯಿರುವ ಗ್ರೀನ್ ಝೋನ್​ಗಳಲ್ಲಿ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಪ್ರತ್ಯೇಕ ಪೋರ್ಟಲ್ ತೆರೆದಿದೆ. ಈ ಮೂಲಕ ಜನ ಗುಂಪು ಸೇರುವುದನ್ನು ತಡೆಯುವ ಉದ್ದೇಶ ಸರ್ಕಾರದ್ದಾಗಿದೆ.

ABOUT THE AUTHOR

...view details