ಕೊರಿಯಾ (ಛತ್ತೀಸ್ಗಢ): ಬೆಂಕಿ ಪಟ್ಟಣ ಹಿಡಿದುಕೊಂಡು ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ಛತ್ತಿಸ್ಗಢದ ಕೊರಿಯಾ ಪ್ರದೇಶದ ಸೊನ್ಹತ್ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬಾಲಕಿ ತಮ್ಮ ತಂದೆ ತಾಯಿ ಜೊತೆ ಸೊನ್ಹತ್ನ ಸಂಬಂಧಿಕರ ಮನೆಗೆ ತೆರಳಿದ್ದಳು. ಈ ವೇಳೆ, ಹುಲ್ಲಿನ ಬಣವೆ ತುಂಬಿದ್ದ ಕೊಠಡಿಯಲ್ಲಿ ಬೆಂಕಿ ಪೊಟ್ಟಣ ಹಿಡಿದು ಆಟವಾಡುತ್ತಿದ್ದಳು. ಆಕಸ್ಮಿಕವಾಗಿ ಈ ಬೆಂಕಿ ಕಿಡಿ ಹುಲ್ಲಿನ ಬಣವೆಗೆ ತಗುಲಿದ್ದು, ಬಾಲಕಿ ಸಜೀವ ದಹನಗೊಂಡಿದ್ದಾಳೆ. ಘಟನೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ, ತನಿಖೆಗೆ ಮುಂದಾದರು. ಮೃತ ಬಾಲಕಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಯುವತಿ ದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.
ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿ ರಾಧೆ ನಗರದ ರಹಮ್ ಲಾಲ್ ಪಂಡೊ ಮತ್ತು ಅವರ ಕುಟುಂಬಸ್ಥರು ಸಹೋದರಿ ಮನೆಗೆ ಬಂದಿದ್ದಾರೆ. ಈ ವೇಳೆ, ನಿರ್ಮಾಣ ಹಂತದ ಕಟ್ಟಡದಲ್ಲಿ ಆಟವಾಡಲು ಬಾಲಕಿ ಹೋಗಿದ್ದಾಳೆ. ಈ ಕಟ್ಟಡದಲ್ಲಿ ಜಾನುವಾರುಗಳಿಗಾಗಿ ಹುಲ್ಲಿನ ಬಣವೆ ಸಂಗ್ರಹಿಸಲಾಗಿತ್ತು. ಬೆಂಕಿ ಪೊಟ್ಟಣ ಹಿಡಿದುಕೊಂಡು ಆಟವಾಡಲು ಹೋದ ಬಾಲಕಿ ಕೈಯಲ್ಲಿ ಕಡ್ಡಿ ಕಿರಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದೆ.
ಬಾಲಕಿಯ ಕಿರುಚಾಟದ ಆಕ್ರಂದನ ಕೇಳಿದಾಕ್ಷಣ ತಾಯಿ ಸೇರಿದಂತೆ ಹಲವು ಮಂದಿ ಆಕೆಯ ರಕ್ಷಣೆಗೆ ಧಾವಿಸಿದ್ದರು. ತಾಯಿ ಸೇರಿದಂತೆ ಗ್ರಾಮದ ಇತರರು ಆಕೆಯನ್ನು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಬಣಗಿದ ಹುಲ್ಲಿನ ಬಣವೆ ಹಿನ್ನಲೆ ಬೆಂಕಿ ಕೆನ್ನಾಲಿಕೆ ಚಾಚಿಕೊಂಡಿದ್ದು, ಆದಾಗಲೇ ಸಮಯ ಮೀರಿ ಹೋಗಿತ್ತು. ಬೆಂಕಿಯ ಹುಡುಗಿಯನ್ನು ಪೂರ್ತಿ ಆಹುತಿಗೆ ತೆಗೆದುಕೊಂಡಿತು.