ಸುಕ್ಮಾ:ಛತ್ತೀಸ್‌ಗಡದ ಬಸ್ತಾರ್ನ ಎರಡು ಜಿಲ್ಲೆಗಳಲ್ಲಿ ಶುಕ್ರವಾರ ದಂಪತಿ ಸೇರಿ 13 ನಕ್ಸಲೀಯರು ಶರಣಾಗಿದ್ದಾರೆ. 8 ಮಂದಿ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಸಿಆರ್ಪಿಎಫ್ ಅಧಿಕಾರಿಗಳ ಮುಂದೆ ಹಾಗೂ ಇತರ 5 ಮಂದಿ ನಕ್ಸಲರು ನೆರೆಯ ದಂತೇವಾಡದಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಕ್ಮಾದಲ್ಲಿ ಶರಣಾದ 8 ನಕ್ಸಲರಲ್ಲಿ ವಂಜಮ್ ಭೀಮಾ ಎಂಬಾತನಿಗಾಗಿ ಪೊಲೀಸರು 2 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಈತನ ಪತ್ನಿ ಸದಸ್ಯ ಪತ್ನಿ ಮಡವಿ ಕಲಾವತಿ ಕೂಡ ಶರಣಾಗಿದ್ದಾರೆ. ರವಿ, ಕೋಸಾ, ದೇವಾ, ಡಿರ್ಡೊ ಗಂಗಾ, ಸೋಡಿ ದುಲಾ ಮತ್ತು ಕವಾಸಿ ದೇವಾ ಎಂಬ ಇತರ ಆರು ಮಂದಿ ಹಾಗೂ ದಂತೇವಾಡದಲ್ಲಿ ಐವರು ಶರಣಾಗಿದ್ದು, ಶಸ್ತ್ರಾಸ್ತ್ರ ಹಸ್ತಾಂತರಿಸಿದ್ದಾರೆ.