ಕರ್ನಾಟಕ

karnataka

ETV Bharat / bharat

ಮಗಳ ಸಾವಿನ ಬಗ್ಗೆ ಅನುಮಾನ : ಸಿಸಿಟಿವಿ ದೃಶ್ಯ ನೀಡುವಂತೆ ಕೇಳಿದ ಗಾಯಕ ಛನ್ನುಲಾಲ್ ಮಿಶ್ರಾ - ಪ್ರಧಾನಿ ನರೇಂದ್ರ ಮೋದಿ

ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರೇ ತಿಳಿಸಿದ್ದಾರೆ. ಆದರೆ, ಇದ್ದಕ್ಕಿಂದಂತೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಹೀಗಾಗಿ, ನಾವು ಸಿಸಿಟಿವಿ ದೃಶ್ಯ ನೋಡಲು ಬಯಸಿದ್ದೇವೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ..

ಗಾಯಕ ಛನ್ನುಲಾಲ್ ಮಿಶ್ರಾ
ಗಾಯಕ ಛನ್ನುಲಾಲ್ ಮಿಶ್ರಾ

By

Published : May 22, 2021, 9:09 PM IST

ವಾರಣಾಸಿ (ಉತ್ತರ ಪ್ರದೇಶ): ಪದ್ಮವಿಭೂಷಣ್ ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ಮಗಳ ಸಾವಿನ ಪ್ರಕರಣದ ನಂತರ ಕುಟುಂಬಸ್ಥರು ಆಸ್ಪತ್ರೆ ಸಿಸಿಟಿವಿ ದೃಶ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯ ಆರೋಪ ಹೊರಿಸಿರುವ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ಮಂಡಳಿ ಬಳಿ ಸಿಸಿಟಿವಿ ದೃಶ್ಯ ನೀಡುವಂತೆ ಕೇಳಿದ್ದಾರೆ.

ಪ್ರಕರಣದ ತನಿಖೆಗಾಗಿ ಜಿಲ್ಲಾಡಳಿತ ಮೂರು ಸದಸ್ಯರ ತಂಡ ರಚಿಸಿದೆ. ಆದರೆ, 20 ದಿನ ಕಳೆದರೂ ತನಿಖೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಸಹಾಯ ಕೋರುವುದಾಗಿಯೂ ತಿಳಿಸಿದ್ದಾರೆ.

ಏಪ್ರಿಲ್ 29ರಂದು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಛನ್ನುಲಾಲ್ ಹಿರಿಯ ಮಗಳು ಸಂಗೀತ ಮಿಶ್ರಾ ವಾರಣಾಸಿಯ ಮೆಡ್ವಿನ್ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಬಲಿಯಾಗಿದ್ದರು.

ಆಕೆಯ ಸಾವಿಗಿಂತ 7 ದಿನಗಳ ಮೊದಲು ಆಸ್ಪತ್ರೆಯ ಆಡಳಿತ ಮಂಡಳಿಯು ಆಕೆಯನ್ನ ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರೇ ತಿಳಿಸಿದ್ದಾರೆ. ಆದರೆ, ಇದ್ದಕ್ಕಿಂದಂತೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಹೀಗಾಗಿ, ನಾವು ಸಿಸಿಟಿವಿ ದೃಶ್ಯ ನೋಡಲು ಬಯಸಿದ್ದೇವೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ABOUT THE AUTHOR

...view details