ಚೆನ್ನೈ(ತಮಿಳುನಾಡು): ಚೆನ್ನೈನ ಜಂಟಿ ಪೊಲೀಸ್ ಆಯುಕ್ತೆಯಾಗಿ ನೇಮಕಗೊಂಡಿರುವ ಮಹಿಳಾ ಐಪಿಎಸ್ ಆರ್.ವಿ.ರಮ್ಯ ಭಾರತಿ ಅವರು ಸೈಕಲ್ ಮೂಲಕವೇ ನಸುಕಿನ ಜಾವ ಗಸ್ತು ತಿರುಗುವ ಮೂಲಕ ಪೊಲೀಸ್ ಸಿಬ್ಬಂದಿಯ ಕರ್ತವ್ಯವನ್ನು ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ತಮಿಳುನಾಡು ಮಾತ್ರವಲ್ಲ, ದೇಶಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದು, ಸಿಎಂ ಎಂ.ಕೆ.ಸ್ಟಾಲಿನ್ ಕೂಡಾ ಟ್ವಿಟರ್ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ಚೆನ್ನೈನ ಬೀದಿಗಳಲ್ಲಿ ನಸುಕಿನ ಜಾವ ಸೈಕಲ್‌ನಲ್ಲೇ ತಿರುಗಿ ಪೊಲೀಸರ ಕರ್ತವ್ಯ ಪರೀಕ್ಷಿಸಿದ ಮಹಿಳಾ IPS ಅಧಿಕಾರಿ!
ತಮಿಳುನಾಡಿನ ಮಹಿಳಾ ಐಪಿಎಸ್ ಅಧಿಕಾರಿ ಆರ್.ವಿ.ರಮ್ಯ ಭಾರತಿ ಅವರು ರಾತ್ರಿ ವೇಳೆ ಸೈಕಲ್ ಮೂಲಕವೇ ಗಸ್ತು ತಿರುಗುತ್ತಿದ್ದು ಪೊಲೀಸ್ ಸಿಬ್ಬಂದಿಯ ಕರ್ತವ್ಯವನ್ನು ಪರಿಶೀಲಿಸಿದ್ದಾರೆ. ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಪ್ತ ಭದ್ರತಾ ಸಿಬ್ಬಂದಿಯೊಂದಿಗೆ ಚೆನ್ನೈ ನಗರದಲ್ಲಿ ರಾತ್ರಿ ಗಸ್ತಿಗೆ ಬಂದ ರಮ್ಯ ಭಾರತಿ ನಸುಕಿನ ಜಾವ 2.45ರಿಂದ 4.15ರವರೆಗೂ ಸೈಕಲ್‌ನಲ್ಲೇ ಸಂಚರಿಸಿದರು. ಉತ್ತರ ಚೆನ್ನೈನಲ್ಲಿ ಸುಮಾರು 9 ಕಿಲೋ ಮೀಟರ್ ಪ್ರಯಾಣಿಸಿರುವ ಇವರು ಹಿರಿಯ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿದ್ದಾರೆ. ರಮ್ಯ ಭಾರತಿ ಗಸ್ತು ತಿರುಗುತ್ತಿರುವ ಚಿತ್ರಗಳು ವೈರಲ್ ಆದ ನಂತರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, 'ಅಭಿನಂದನೆಗಳು ರಮ್ಯ ಭಾರತಿ, ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾನು ಡಿಜಿಪಿಗೆ ಆದೇಶಿಸಿದ್ದೇನೆ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.