ಕರ್ನಾಟಕ

karnataka

ETV Bharat / bharat

2015ರ ಪ್ರವಾಹದ ನಂತರ ಅಧಿಕಾರಿಗಳು ಏನು ಮಾಡ್ತಿದ್ರು? ಮದ್ರಾಸ್‌ ಹೈಕೋರ್ಟ್ - Chennai latest update

ರಸ್ತೆಗಳ ಅಗಲೀಕರಣ, ಪಾದಚಾರಿ ಸ್ಥಳ ಒತ್ತುವರಿ ತೆರವು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಯಿತು. ಈ ವೇಳೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಹೈಕೋರ್ಟ್
ಹೈಕೋರ್ಟ್

By

Published : Nov 9, 2021, 3:53 PM IST

ಚೆನ್ನೈ: ಧಾರಾಕಾರ ಮಳೆಯಿಂದಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ. ಈ ನಡುವೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಈ ನಡುವೆ ರಸ್ತೆಗಳ ಅಗಲೀಕರಣ, ಪಾದಚಾರಿ ಸ್ಥಳ ಒತ್ತುವರಿ ತೆರವು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಆದಿಕೇಶವಲು ಅವರ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ: ವರುಣನ ರೌದ್ರಾವತಾರ: ಆರು ವರ್ಷದ ಬಳಿಕ ಮಹಾ ಮಳೆಗೆ ನಲುಗಿದ ಚೆನ್ನೈ, ರೆಡ್ ಅಲರ್ಟ್ ಘೋಷಣೆ

ಅರ್ಜಿದಾರರ ಮನವಿಯನ್ನು ಅನುಸರಿಸಲು ನಿರಾಕರಿಸಿದ ನ್ಯಾಯಾಧೀಶರು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅನ್ನು ತರಾಟೆಗೆ ತೆಗೆದುಕೊಂಡರು. 2015 ರ ಪ್ರವಾಹದ ನಂತರ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಯೋಜನೆ ರೂಪಿಸಿದ್ದರೂ ಮಳೆಗಾಲದಲ್ಲಿ ನಗರ ಮುಳುಗಡೆಯಾಗದಂತೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳದಿರುವುದು ಖಂಡನೀಯ. ಒಂದು ವಾರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರದಿದ್ದರೆ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಳ್ಳಲು ಸೂಚನೆ ನೀಡಬೇಕಾಗುತ್ತದೆ ಎಂದು ಎಂದು ನ್ಯಾಯಾಲಯವು ಪಾಲಿಕೆಗೆ ಎಚ್ಚರಿಕೆ ನೀಡಿತು.

ABOUT THE AUTHOR

...view details