ಚೆನ್ನೈ ( ತಮಿಳುನಾಡು): ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 15 ಲಕ್ಷ ಮೌಲ್ಯದ 295 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ
ಸೌದಿ ಅರೇಬಿಯಾದಿಂದ ಚೆನ್ನೈನ ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವಿಮಾನದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ:ಮಣ್ಣಿನ ಹಾವಿನ ಅಕ್ರಮ ಮಾರಾಟ ಯತ್ನ: ನಾಲ್ವರ ಬಂಧನ
ಮೊದಲಿಗೆ ಪ್ರಯಾಣಿಕರ ಸಾಮಗ್ರಿಗಳನ್ನು ಮೊದಲಿಗೆ ತಪಾಸಣೆ ಮಾಡಲಾಯಿತು. ಆದರೂ ಚಿನ್ನ ದೊರಕದೇ ಇದ್ದಾಗ ಖರ್ಜೂರ, ಪರ್ಸಿಮನ್ ಹಣ್ಣುಗಳನ್ನು ಸಾಗಿಸುತ್ತಿದ್ದ ಬಾಕ್ಸ್ಗಳ ಪರಿಶೀಲನೆ ನಡೆಸಿದ್ದಾರೆ. ಅವುಗಳ ಬಳಿಯಿದ್ದ ಪೇರಳೆ ಹಣ್ಣುಗಳ ತಪಾಸಣೆ ನಡೆಸಿದಾಗ ಅವುಗಳಲ್ಲಿ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.
ಈ ಚಿನ್ನದ ಗಟ್ಟಿಗಳ ಮೌಲ್ಯ 15 ಲಕ್ಷ ರೂಪಾಯಿಯಾಗಿದ್ದು, ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.