ಕರ್ನಾಟಕ

karnataka

ETV Bharat / bharat

ಪೋಷಕರ ವಿರೋಧ ಲೆಕ್ಕಿಸದೆ ಮದುವೆ: ಹತ್ಯೆಯ ಭಯದಲ್ಲಿ ರಸ್ತೆಯಲ್ಲೇ ರಕ್ಷಣೆಗೆ ಗೋಗರೆದ ನವಜೋಡಿ - ಪೋಷಕರಿಂದ ನವಜೋಡಿಗೆ ಬೆದರಿಕೆ

ಪೋಷಕರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ತಮ್ಮ ರಕ್ಷಣೆಗೆ ನಡುರಸ್ತೆಯಲ್ಲೇ ಗೋಗರೆದಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

Chennai couple screamed in public
Chennai couple screamed in public

By

Published : Mar 4, 2022, 3:58 PM IST

Updated : Mar 4, 2022, 4:17 PM IST

ಕೊಯಮತ್ತೂರು(ತಮಿಳುನಾಡು): ಕಳೆದ ಕೆಲವು ದಿನಗಳ ಹಿಂದೆ ಪೋಷಕರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯನ್ನು ಅಪಹರಿಸಿ, ಹಲ್ಲೆಗೆ ಯತ್ನಿಸಿರುವ ಪ್ರಕರಣ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಕ-ಯುವತಿಯನ್ನು ಬಲ ಪ್ರಯೋಗದಿಂದ ಅಪಹರಿಸಿ, ಕಾರಿನೊಳಗೆ ಹಾಕಿಕೊಂಡು ಹೋಗುವ ಯತ್ನ ನಡೆದಿದೆ. ಈ ವೇಳೆ ಇಬ್ಬರು ರಸ್ತೆಯಲ್ಲೇ ತಮ್ಮ ಪ್ರಾಣ ರಕ್ಷಣೆಗೆ ಅಂಗಲಾಚಿದ್ದಾರೆ. ಈ ಸಂದರ್ಭದ ವಿಡಿಯೋ ಲಭ್ಯವಾಗಿದೆ.

ಹತ್ಯೆಯ ಭಯದಲ್ಲಿ ರಸ್ತೆಯಲ್ಲೇ ರಕ್ಷಣೆಗೆ ಗೋಗರೆದ ನವಜೋಡಿ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಣಿಯಕರಪಾಳ್ಯದ ವಿಘ್ನೇಶ್ ಮತ್ತು ಸರವಣಂಪಟ್ಟಿಯ ಸ್ನೇಹಾ ಇತ್ತೀಚೆಗೆ ಮದುವೆಯಾಗಿದ್ದಾರೆ. ಇದರಿಂದ ಕೋಪಗೊಂಡಿದ್ದ ಯುವತಿಯ ಕುಟುಂಬಸ್ಥರು ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಗುರುವಾರ ರಾತ್ರಿ ಈ ಜೋಡಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ವಿಘ್ನೇಶ್​ಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ:ಪ್ರಾರ್ಥನೆ ವೇಳೆ ಮಸೀದಿಯಲ್ಲಿ ಬಾಂಬ್​ ಸ್ಫೋಟ: 30 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ನಡುರಸ್ತೆಯಲ್ಲೇ ರಕ್ಷಣೆಗೆ ಗೊಗರೆಯುತ್ತಿರುವ ಮಾಹಿತಿ ಸಂಚಾರಿ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ, ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ್ದು ದಂಪತಿ ಹಾಗೂ ಸಂಬಂಧಿಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

Last Updated : Mar 4, 2022, 4:17 PM IST

ABOUT THE AUTHOR

...view details