ಚೆನ್ನೈ(ತಮಿಳುನಾಡು): ಗುಪ್ತಾಂಗ, ಒಳ ಉಡುಪು, ಗುದದ್ವಾರದಲ್ಲಿ ಡ್ರಗ್ಸ್ ಇಟ್ಟುಕೊಂಡು ಸಾಗಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ, ಇದೀಗ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್ ಮಾಡುವ ಪ್ರಕರಣ ಬೆಳಕಿಗೆ ಬರಲು ಶುರುವಾಗಿವೆ. ಅಂತಹ ವ್ಯಕ್ತಿಯೊಬ್ಬನನ್ನು ಬಂಧನ ಮಾಡುವಲ್ಲಿ ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಾಂಜಾನಿಯಾ ಪ್ರಜೆಯಿಂದ ಸುಮಾರು 9 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 1.266 ಕೆಜಿ ತೂಕದ ಹೆರಾಯಿನ್ ಕ್ಯಾಪ್ಸುಲ್ ನುಂಗಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ:109 ಹೆರಾಯಿನ್ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್.. ಆರೋಪಿ ಬಲೆಗೆ ಬಿದ್ದಿದ್ದು ಹೀಗೆ!
ಇಥಿಯೋಪಿಯನ್ ಏರ್ಲೈನ್ಸ್ ವಿಮಾನದಲ್ಲಿ ಉಗಾಂಡಾದಿಂದ ತಾಂಜೇನಿಯಾ ವ್ಯಕ್ತಿ ಜುಲೈ 14ರಂದು ಚೆನ್ನೈಗೆ ಆಗಮಿಸಿದ್ದರು. ಈ ವೇಳೆ, ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಹೆರಾಯಿನ್ ಕ್ಯಾಪ್ಸುಲ್ ನುಂಗಿರುವುದು ತಿಳಿದು ಬಂದಿದೆ. ಕಳೆದ ಮೇ ತಿಂಗಳಲ್ಲಿ ಹೈದರಾಬಾದ್ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಇದೇ ರೀತಿಯಾಗಿ ಸಿಕ್ಕಿಬಿದ್ದಿದ್ದ. ಆರೋಪಿ ಹೊಟ್ಟೆಯಲ್ಲಿ 109 ಹೆರಾಯಿನ್ ಕ್ಯಾಪ್ಸುಲ್ ಇದ್ದವು.
ಮತ್ತೊಂದು ಪ್ರಕರಣದಲ್ಲಿ ಪಂಜಾಬ್ನ ಅಮೃತಸರ್ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ 933.2 ಗ್ರಾಮ ಚಿನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ದುಬೈನಿಂದ ಭಾರತಕ್ಕೆ ಬಂದ ವ್ಯಕ್ತಿ ಬಳಿ ಇಷ್ಟೊಂದು ಚಿನ್ನ ಪತ್ತೆಯಾಗಿದೆ.