ನವದೆಹಲಿ :ಇ-ಕಾಮರ್ಸ್ ದೈತ್ಯ ಅಮೆಜಾನ್(Amazon) ವಿರುದ್ಧ ಪುಲ್ವಾಮಾ ದಾಳಿ ವೇಳೆ (Pulwama attack) ಸ್ಫೋಟಕ್ಕೆ ಬಳಸಲಾಗುವ ರಾಸಾಯನಿಕಗಳನ್ನು ಸರಬರಾಜು ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.
2019ರಲ್ಲಿ 40 ಸಿಆರ್ಪಿಎಫ್ ಯೋಧರ ಮಾರಣಹೋಮಕ್ಕೆ ಕಾರಣವಾದ ಸುಧಾರಿತ ಸ್ಫೋಟಕ ಸಾಧನಗಳನ್ನು(IED) ತಯಾರಿಸಲು ಬಳಸುವ ರಾಸಾಯನಿಕಗಳನ್ನು ಇದೇ ಅಮೆಜಾನ್ ಮೂಲಕವೇ ಭಯೋತ್ಪಾದಕರು (Chemicals of bombs used Pulwama attack via Amazon) ಪಡೆದುಕೊಂಡಿದ್ದರು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT Offence against Amazon)ಆರೋಪಿಸಿದೆ.
ಪುಲ್ವಾಮಾ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಭಾರತದಲ್ಲಿ ನಿಷಿದ್ಧ ವಸ್ತುವಾಗಿರುವ ಅಮೋನಿಯಂ ನೈಟ್ರೇಟ್ ಅನ್ನು ಅಮೆಜಾನ್ ಪೋರ್ಟಲ್ ಮೂಲಕವೇ ಭಯೋತ್ಪಾದಕರು ಖರೀದಿಸಿದ್ದಾರೆ ಎಂದು ಎನ್‌ಐಎ(NIA) ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. I ಬಗ್ಗೆ ಮಾಧ್ಯಮಗಳು ಕೂಡ ವ್ಯಾಪಕವಾಗಿ ಸುದ್ದಿ ಮಾಡಿವೆ ಎಂದು CAIT ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇ-ಕಾಮರ್ಸ್ ಪೋರ್ಟಲ್ಗಳ ಮೇಲೆ ಪರಿಣಾಮಕಾರಿ ನೀತಿಗಳನ್ನು ರೂಪಿಸಲಾಗಿಲ್ಲ. ನಿಷೇಧಿತ ವಸ್ತುಗಳನ್ನು ಇ-ಕಾಮರ್ಸ್ ಪೋರ್ಟಲ್ಗಳು ಪೂರೈಕೆ ಮಾಡುವುದು ಬೆಳಕಿಗೆ ಬಂದರೂ ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳದೇ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.