ತಿರುಪತಿ, ಆಂಧ್ರಪ್ರದೇಶ :ಶ್ರೀವೆಂಕಟೇಶ್ವರನ ಸನ್ನಿಧಾನವಿರುವ ತಿರುಪತಿಯ ತಿರುಮಲ ಬೆಟ್ಟದ ರಸ್ತೆಗಳಲ್ಲಿ ಚಿರತೆ ಅಡ್ಡಾಡುತ್ತಿರುವುದು ಭಕ್ತರ ಮೊಬೈಲ್ನಲ್ಲಿ ಸೆರೆಯಾಗಿದೆ. ಹರಿಣಿ ಪ್ರದೇಶದ ರಸ್ತೆ ಬದಿಯ ಗೋಡೆಯ ಮೇಲೆ ಚಿರತೆ ಕುಳಿತಿರುವುದು ಆತಂಕ ಸೃಷ್ಟಿಸಿದೆ.
ಭಕ್ತರು ವಾಹನದಲ್ಲಿ ತೆರಳುವಾಗ ಚಿರತೆ ಕಂಡಿದೆ. ಭದ್ರತಾ ಸಿಬ್ಬಂದಿಗೆ ವಿಷಯ ತಲುಪಿಸಿದ್ದಾರೆ. ಇದಾದ ನಂತರ ಭದ್ರತಾ ಸಿಬ್ಬಂದಿ ಉಳಿದ ಭಕ್ತರನ್ನು ಈ ಕುರಿತು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ತಿರುಮಲದ ರಸ್ತೆಗಳಲ್ಲಿನ ವಾಹನಗಳಲ್ಲಿ ಪ್ರಯಾಣಿಸುವಾಗ, ಯಾವುದೇ ಕಾರಣಕ್ಕೂ ವಾಹನಗಳಿಂದ ಕೆಳಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.