ಕರ್ನಾಟಕ

karnataka

By

Published : Oct 28, 2022, 3:47 PM IST

ETV Bharat / bharat

ಸುದ್ದಿ, ಸಂದೇಶ ಫಾರ್ವರ್ಡ್​ ಮಾಡುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ: ಪ್ರಧಾನಿ ಮೋದಿ

ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ತಂತ್ರಜ್ಞಾನವು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮೊದಲು ಅವುಗಳನ್ನು ಪರಿಶೀಲಿಸುವ ಕಾರ್ಯವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಸುದ್ದಿ, ಸಂದೇಶ ಫಾರ್ವರ್ಡ್​ ಮಾಡುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ: ಪ್ರಧಾನಿ ಮೋದಿ
Check facts before sharing on social media PM Modi on war against fake news

ನವದೆಹಲಿ: ಸುಳ್ಳು ಸುದ್ದಿಗಳ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ ಮತ್ತು ಅದು ಸೃಷ್ಟಿಸುವ ಸಣ್ಣದೊಂದು ಸುಳ್ಳು ಸುದ್ದಿಯು ಅವ್ಯವಸ್ಥೆಯನ್ನೇ ಸೃಷ್ಟಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುವ ಮೊದಲು ಜನತೆ ಸತ್ಯಗಳನ್ನು ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದರು.

ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹರಿಯಾಣದಲ್ಲಿ ರಾಜ್ಯಗಳ ಗೃಹ ಮಂತ್ರಿಗಳ ಚಿಂತನ್ ಶಿಬಿರ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾನೂನು ಪಾಲಿಸುವ ನಾಗರಿಕರ ಸುರಕ್ಷತೆ ಮತ್ತು ಹಕ್ಕುಗಳಿಗಾಗಿ, ನಕಾರಾತ್ಮಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಒಂದು ಸಣ್ಣ ಸುಳ್ಳು ಸುದ್ದಿಯು ರಾಷ್ಟ್ರದಾದ್ಯಂತ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಬಹುದು. ಯಾವುದನ್ನೇ ಆದರೂ ಫಾರ್ವರ್ಡ್ ಮಾಡುವ ಮೊದಲು ಯೋಚಿಸುವಂತೆ ಹಾಗೂ ಅದನ್ನು ನಂಬುವ ಮೊದಲು ಪರಿಶೀಲಿಸುವಂತೆ ಜನರಿಗೆ ಶಿಕ್ಷಣ ನೀಡಬೇಕಿದೆ ಎಂದರು.

ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ತಂತ್ರಜ್ಞಾನವು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮೊದಲು ಅವುಗಳನ್ನು ಪರಿಶೀಲಿಸುವ ಕಾರ್ಯವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಎಲ್ಲ ಸರ್ಕಾರಗಳು ಭಯೋತ್ಪಾದನೆಯ ಮೂಲವನ್ನು ನಾಶಮಾಡಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ. ನಾವು ನಮ್ಮ ಪಡೆಗಳನ್ನು ಒಗ್ಗೂಡಿಸುವುದರ ಮೂಲಕ ಅದನ್ನು ನಿಭಾಯಿಸಬೇಕಾಗಿದೆ. ನಕ್ಸಲಿಸಂನ ಎಲ್ಲ ರೂಪಗಳನ್ನು ಸೋಲಿಸಬೇಕಾಗಿದೆ - ಅದು ಬಂದೂಕು ಹಿಡಿದಿರಲಿ ಅಥವಾ ಪೆನ್ನು ಹಿಡಿದಿರಲಿ, ನಾವು ಅವೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಇಂದು ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ನಾವು ಹೊಸ ಯುಗದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. 5G ಯುಗ ಪ್ರವೇಶಿಸಿದ್ದೇವೆ. ಆದ್ದರಿಂದ ನಾವು ಹೆಚ್ಚು ಜಾಗರೂಕರಾಗಿರಬೇಕಿದೆ.

5ಜಿ ತಂತ್ರಜ್ಞಾನದ ಪ್ರಗತಿಯೊಂದಿಗೆ ಜಾಗೃತಿಯೂ ಅಷ್ಟೇ ಮುಖ್ಯವಾಗಿದೆ. ಭಾರತದ ಕಾನೂನು ಮತ್ತು ಸುವ್ಯವಸ್ಥೆಯು ಸ್ಮಾರ್ಟ್ ಆಗುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ತಂತ್ರಜ್ಞಾನವು ಅಪರಾಧಗಳನ್ನು ತಡೆಗಟ್ಟುವಲ್ಲಿ ಮಾತ್ರವಲ್ಲದೆ ಅಪರಾಧ ತನಿಖೆಯಲ್ಲಿಯೂ ಸಹಾಯ ಮಾಡುತ್ತದೆ. ಅಪರಾಧ ಪ್ರಪಂಚಕ್ಕಿಂತಲೂ ನಾವು 10 ಹೆಜ್ಜೆ ಮುಂದಿಡಬೇಕು ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ.. 35 ವಾಟ್ಸಾಪ್ ಗ್ರೂಪ್​ ನಿಷೇಧ

ABOUT THE AUTHOR

...view details