ಕರ್ನಾಟಕ

karnataka

ETV Bharat / bharat

ವಂಚನೆ ಪ್ರಕರಣ: ವಿಚಾರಣೆಗಾಗಿ ಕಿರಣ್​ ಗೋಸಾವಿ ಮುಂಬೈಗೆ ಕರೆದೊಯ್ದ ಪುಣೆ ಪೊಲೀಸರು

ವಂಚನೆ ಪ್ರಕರಣದ ಆರೋಪಿ ಕಿರಣ್ ಗೋಸಾವಿಯನ್ನು ಪುಣೆ ಪೊಲೀಸರು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ದಿದ್ದಾರೆ.

Gosavi
Gosavi

By

Published : Oct 30, 2021, 1:23 PM IST

ಪುಣೆ (ಮಹಾರಾಷ್ಟ್ರ):ಡ್ರಗ್ಸ್ ಪ್ರಕರಣದ ಸಾಕ್ಷಿ ಹಾಗೂ ಪುಣೆ ವಂಚನೆ ಪ್ರಕರಣದ ಆರೋಪಿ ಕಿರಣ್ ಗೋಸಾವಿಯನ್ನು ಪುಣೆ ಪೊಲೀಸರು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ದಿದ್ದಾರೆ. ಕಿರಣ್ ಗೋಸಾವಿ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಪುಣೆ ಪೊಲೀಸರು ಕಳೆದ ಎರಡು ದಿನಗಳ ಹಿಂದಷ್ಟೇ ಗೋಸಾವಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 8 ದಿನಗಳ ಕಾಲ ವಶಕ್ಕೆ ಪಡೆದಿದ್ದರು.

ಪ್ರಕರಣದ ಹಿನ್ನೆಲೆ

2018ರ ಮೇ 19ರಂದು ಕಿರಣ್ ಗೋಸಾವಿ ವಿರುದ್ಧ ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸು ದಾಖಲಾಗಿತ್ತು. ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ ಆರೋಪ ಈತನ ಮೇಲಿತ್ತು. ಉದ್ಯೋಗ ಕೊಡಿಸುವುದಾಗಿ 2017-18 ರ ಅವಧಿಯಲ್ಲಿ ಗೋಸಾವಿ, ಆ ಯುವಕನಿಂದ ಅಂದಾಜು 3.09 ಲಕ್ಷ ರೂ. ಪಡೆದು ವಂಚಿಸಿದ್ರು.

ಇದನ್ನೂ ಓದಿ: ಡ್ರಗ್ಸ್‌ ಪ್ರಕರಣ: ಕೊನೆಗೂ ಜೈಲಿನಿಂದ ಹೊರ ಬಂದ ಶಾರುಖ್‌ ಪುತ್ರ ಆರ್ಯನ್‌ ಖಾನ್‌

ABOUT THE AUTHOR

...view details