ನವದೆಹಲಿ:ಬಾಲಿವುಡ್ ನಟಿ ಜಾಕ್ವೆಲಿನ್ ಸದ್ಯ 215 ಕೋಟಿ ರೂ. ಅಕ್ರಮ ವರ್ಗಾವಣೆ ಮತ್ತು ವಂಚನೆ ಪ್ರಕರಣದ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ ಈಗಾಗಲೇ ಕೋರ್ಟ್‌ಗೆ ವಿವರವಾದ ಚಾರ್ಜ್ಶೀಟ್ ಸಹ ಸಲ್ಲಿಸಿದೆ. ಅದರಲ್ಲಿರುವ ಮುಖ್ಯ ಅಂಶಗಳು ಹಾಗು ಪ್ರಕರಣದ ಪ್ರಮುಖ ಬೆಳವಣಿಗೆಗಳನ್ನು ಇಲ್ಲಿ ನೀಡಲಾಗಿದೆ.
1. ಸುಕೇಶ್ ಚಂದ್ರಶೇಖರ್ ಕ್ರಿಮಿನಲ್ ಎಂಬುದು ಗೊತ್ತಿದ್ದರೂ ನಟಿ ಅದನ್ನು ಕಡೆಗಣಿಸಿ ಅವರೊಂದಿಗೆ ಹಣಕಾಸಿನ ವಹಿವಾಟು ಮುಂದುವರೆಸಿದ್ದಾರೆ. ಆಕೆ ಮಾತ್ರವಲ್ಲ, ಆಕೆಯ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇದನ್ನು ಅವರು ಪರಿಗಣನೆಗೆ ತೆಗೆದುಕೊಂಡಿಲ್ಲ.
2. ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅವರ ಸಂಬಂಧಿಕರು ಉಡುಗೊರೆಗಳನ್ನು ಸ್ವೀಕರಿಸುವ ಬಗ್ಗೆ ನಿರಂತರವಾಗಿ ತಮ್ಮ ನಿಲುವು ಬದಲಾಯಿಸಿದ್ದಾರೆ. ಅವರಿಂದ ಹೇಳಿಕೆ ಪಡೆದಾಗ ಮಾತ್ರ ಈ ಬಗ್ಗೆ ಸವಿವರವಾದ ಮಾಹಿತಿ ಲಭಿಸಿದೆ. ಆದ್ರೂ ನಟಿ, ಸುಕೇಶ್ ಖರೀದಿಸಿರುವ ಕೆಲವು ಆಸ್ತಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
3. ಸುಖೇಶ್ ಚಂದ್ರಶೇಖರ್ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯನ್ ಬೆಕ್ಕನ್ನು ಜಾಕ್ವೆಲಿನ್ ಫರ್ನಾಂಡೀಸ್ ಉಡುಗೊರೆಯಾಗಿ ನೀಡಿದ್ದ. ಜಾಕ್ವೆಲಿನ್ ಕುಟುಂಬಸ್ಥರಿಗೆ USD 1 ಲಕ್ಷ ಮತ್ತು AUD 2,67,40 ಉಡುಗೊರೆಯಾಗಿ ನೀಡಿದ್ದಾನೆ. ಇದನ್ನು ಪಡೆಯುವ ಮೂಲಕ ಅವರು ಅಪರಾಧ ಮಾಡಿದ್ದಾರೆ.
4. ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೊದಲ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಸುಖೇಶ್ ಚಂದ್ರಶೇಖರ್ ವಂಚಸಿದ ಹಣವನ್ನು ನಟಿ ಹೇಗೆಲ್ಲಾ ಬಳಸಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ.
5. PMLA, 2002 ರ ಸೆಕ್ಷನ್ 3ರ ಅಡಿಯಲ್ಲಿ ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಅವರು POC ಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತು ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಅಪರಾಧ ಮಾಡಿದ್ದಾರೆ.
6. ಸುಕೇಶ್ ಚಂದ್ರಶೇಖರ್ ಮತ್ತು ಇತರರು ಒಳಗೊಂಡಿರುವ 200 ಕೋಟಿ ರೂ. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಬುಧವಾರ ನಟಿಗೆ ಸಮನ್ಸ್ ಜಾರಿ ಮಾಡಿದೆ.
7.ಜೊತೆಗೆ, ಐಷಾರಾಮಿ ಬ್ರಾಂಡ್‌ಗಳಾದ ಗುಸ್ಸಿ ಮತ್ತು ಶನೆಲ್ ನ ಡಿಸೈನರ್ ಬ್ಯಾಗ್‌ಗಳು ಮತ್ತು ಬಟ್ಟೆಗಳನ್ನು ಸಹ ಜಾಕ್ವೆಲಿನ್‌ಗೆ ಉಡುಗೊರೆಯಾಗಿ ನೀಡಿದ್ದ. ಹಾಗೂ ಜಾಕ್ವೆಲಿನ್ ವೆಬ್ ಸೀರೀಸ್ ಪ್ರಾಜೆಕ್ಟ್ ನ ಸ್ಕ್ರಿಪ್ಟ್ ಬರೆಯಲು ಸ್ಕ್ರಿಪ್ಟ್ ರೈಟರ್‌ಗೆ 15 ಲಕ್ಷ ರೂ ಅನ್ನು ಸುಖೇಶ್ ನೀಡಿದ್ದಾನೆ. ಸುಖೇಶ್ ಚಂದ್ರಶೇಖರ್ ತನ್ನ ದೀರ್ಘಕಾಲದ ಸಹವರ್ತಿ ಮತ್ತು ಸಹ ಆರೋಪಿ ಪಿಂಕಿ ಇರಾನಿ ಮೂಲಕ ಈ ಉಡುಗೊರೆಗಳನ್ನು ಜಾಕ್ವೆಲಿನ್ ಫರ್ನಾಂಡಿಸ್‌ಗೆ ತಲುಪಿಸಿದ್ದ ಎಂದು ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
8.ಇದರ ನಡುವೆಯೇ ಜಾರಿ ನಿರ್ದೇಶನಾಲಯವು ಜಾಕ್ವೆಲಿನ್ ಫರ್ನಾಂಡಿಸ್ ರ 7 ಕೋಟಿ ರೂ. ಮೌಲ್ಯದ ಉಡುಗೊರೆಗಳು, ಆಸ್ತಿಯನ್ನು ಜಪ್ತಿ ಮಾಡಿದೆ. ಜೊತೆಗೆ ಹಲವು ಬಾರಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಸುಖೇಶ್ ನೀಡಿದ್ದ ಮಿನಿ ಕೂಪರ್ ಕಾರ್ ವಾಪಸ್ ನೀಡಿರೋದಾಗಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ದೆಹಲಿ ಕೋರ್ಟ್‌ನಿಂದ ಸಮನ್ಸ್
ಆಗಸ್ಟ್ 17 ರಂದು ಜಾರಿ ನಿರ್ದೇಶನಾಲಯವು 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಉಲ್ಲೇಖಿಸಿ, ಸುಕೇಶ್ ಚಂದ್ರಶೇಖರ್ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಬುಧವಾರ, ಪೂರಕ ಚಾರ್ಜ್ ಶೀಟ್ ಗಮನದಲ್ಲಿಟ್ಟುಕೊಂಡು, ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸೆಪ್ಟೆಂಬರ್ 26 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.