ಕರ್ನಾಟಕ

karnataka

ETV Bharat / bharat

ಗ್ಯಾಂಗ್​ ರೇಪ್​ ಕೇಸ್​: ಬಾಲಕಿ ತಂದೆ, ಎಸ್ಪಿ, ಬಿಎಸ್ಪಿ ನಾಯಕರ ವಿರುದ್ಧ ಚಾರ್ಜ್​ಶೀಟ್ - Charge sheet filed against SP, BSP leaders

SP, BSP leaders in gang-rape case: ಕಳೆದ ನಾಲ್ಕು ವರ್ಷಗಳಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ತಂದೆ, ಎಸ್ಪಿ, ಬಿಎಸ್ಪಿ ಸ್ಥಳೀಯ ನಾಯಕರು ಸೇರಿ 19 ಜನರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

Charge sheet filed against SP, BSP leaders in gang-rape case
ಗ್ಯಾಂಗ್​ರೇಪ್​ ಕೇಸ್

By

Published : Jan 24, 2022, 2:42 PM IST

ಲಲಿತ್‌ಪುರ (ಉತ್ತರ ಪ್ರದೇಶ): 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮಾಜಿ ಜಿಲ್ಲಾಧ್ಯಕ್ಷರ ವಿರುದ್ಧ ಲಲಿತ್‌ಪುರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಪ್ರಾಪ್ತೆಯೊಬ್ಬಳು ತನ್ನ ಮೇಲೆ ನಾಲ್ಕು ವರ್ಷಗಳಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ತಾಯಿಯೊಂದಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಗಳ ಪೈಕಿ ಆಕೆಯ ತಂದೆ ಕೂಡ ಒಬ್ಬರಾಗಿದ್ದರು. ಉಳಿದಂತೆ ಎಸ್ಪಿ, ಬಿಎಸ್ಪಿ ನಾಯಕರು, ಆಕೆಯ ಇತರ ಸಂಬಂಧಿಕರು ಸೇರಿ ಒಟ್ಟು 19 ಮಂದಿಯ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಳು.

"ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಮೇಲೆ ನಾವು ಇತ್ತೀಚೆಗೆ ಹುಡುಗಿಯ ತಂದೆ ಮತ್ತು ಸ್ಥಳೀಯ ರಾಜಕೀಯ ಮುಖಂಡರು ಸೇರಿದಂತೆ 19 ಜನರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದೇವೆ. ಇಬ್ಬರು ಆರೋಪಿಗಳನ್ನು ಹೊರತುಪಡಿಸಿ 17 ಜನರನ್ನು ಜೈಲಿನಲ್ಲಿ ಇರಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಸಾವು-ಬದುಕಿನ ಹೋರಾಟದಲ್ಲಿ ಸಂತ್ರಸ್ತೆ

"ನಾನು 14 ವರ್ಷದವಳಿದ್ದಾಗ ನನಗೆ ಬಲವಂತವಾಗಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ನನ್ನ ತಂದೆಯೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ನನ್ನನ್ನು ವಿವಿಧ ಹೋಟೆಲ್‌ಗಳಿಗೆ ಕರೆದೊಯ್ಯಲು ಪ್ರಾರಂಭಿಸಿದನು. ಈ ವೇಳೆ ಅನೇಕ ಮಂದಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು ಎಂದು" ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details