ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥ ಎಂದಾಗ ಎಲ್ಲರಲ್ಲೂ ಭಕ್ತಿ ಭಾವ ಮೂಡುತ್ತದೆ. ಇಲ್ಲಿನ ಪರಿಸರ ದೈವಿಕತೆ ಎಲ್ಲನ್ನೂ ಪುನೀತವಾಗಿಸುತ್ತದೆ. ಅಲ್ಲದೇ ಕೇದಾರನಾಥ ದೇವಾಲಯದ ಹಿನ್ನೆಲೆ ಪರಿಸರ ಎಷ್ಟು ಮನಮೋಹಕ ಎಂದರೆ, ಹಿಮಾಚ್ಚಾದಿತ ಬೆಟ್ಟದ ನಡುವೆ ದೇವಸ್ಥಾನವನ್ನು ನೋಡುವುದು ಎರಡು ಕಣ್ಣುಗಳಿಗೆ ರಮಣೀಯ ದೃಶ್ಯವೇ ಸರಿ. ಇದೆಲ್ಲದರ ನಡುವೆ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಳ್ಳುವುದು ಕೆಲವರಿಗೆ ಒಂದು ಕನಸೇ. ಈ ಕನಸನ್ನು ಒಬ್ಬಳು ಈಡೇರಿಸಿಕೊಂಡಿದ್ದಾರೆ. ಆದರೆ ಅದು ಮಾತ್ರ ವಿವಾದಕ್ಕೆ ಕಾರಣವಾಗಿದೆ.
ಕೇದಾರನಾಥ ಧಾಮದಲ್ಲಿ ಮಹಿಳಾ ಮೋಟೋ ಬ್ಲಾಗರ್ ತನ್ನ ಬಾಯ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಭಕ್ತರು ನಾನಾ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಅಲ್ಲದೇ ಬದ್ರಿ-ಕೇದಾರ ದೇವಸ್ಥಾನ ಸಮಿತಿಯನ್ನು ಚಾರ್ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಮತ್ತು ಹಿರಿಯ ಯಾತ್ರಾರ್ಥಿ ಪುರೋಹಿತ್ ದೂಷಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳನ್ನು ಮಾಡುವುದಕ್ಕೆ ಸರಿಯಾದ ನಿಯಮಗಳನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿ ಮಾಡುದರಿಂದ ಸಂಪ್ರದಾಯ ಮನೋಭಾಕ್ಕೆ ಧಕ್ಕೆಯಾಗುತ್ತದೆ. ಬದರಿ-ಕೇದಾರ ದೇವಸ್ಥಾನ ಸಮಿತಿ ಈ ಕುರಿತು ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ.
ಬದರಿ-ಕೇದಾರ ದೇವಸ್ಥಾನ ಸಮಿತಿ ವಿರುದ್ಧ ಆರೋಪ:ರೈಡರ್ ಗರ್ಲ್ ವಿಶಾಖಾ ಕೇದಾರನಾಥ ಧಾಮದಲ್ಲಿ ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿ ತಬ್ಬಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಿನಿಂದ ಧರ್ಮ ಮತ್ತು ಸಂಪ್ರದಾಯದ ಜೊತೆ ಆಡುತ್ತಿದ್ದಿರಾ ಎಂದು ಕೆಲ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಈ ವಿಡಿಯೋದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದರೆ, ಕೋಟ್ಯಂತರ ಹಿಂದೂಗಳ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಇದೀಗ ಚಾರ್ ದಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಹಾಗೂ ಹಿರಿಯ ಯಾತ್ರಾರ್ಥಿ ಸಂತೋಷ್ ತ್ರಿವೇದಿ ಈ ವಿಡಿಯೋ ಕುರಿತು ಹೇಳಿಕೆ ನೀಡಿದ್ದಾರೆ.