ಪಾಟ್ನಾ:ವಿಷಪೂರಿತ ಮದ್ಯ ಸೇವಿಸಿ 70 ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿತ್ತು. ಈ ದುರ್ಘಟನೆಯ ನಂತರ ಪೊಲೀಸ್ ಕಾರ್ಯಚರಣೆಯು ತೀವ್ರವಾಗಿ ಶುರುವಾಗಿತ್ತಾದರೂ, ತನಿಖೆ ಕುರಿತು ನಿತೀಶ್ ಸರ್ಕಾರದ ಆಡಳಿತದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುವುದಲ್ಲದೇ ಟೀಕೆಗೂ ಗುರಿಯಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರ ಬಂಧನ ಕೂಡ ಮಾಡಿದ್ದರು. ಇದೀಗ ಮುಖ್ಯವಾಗಿ ಕಲಬೆರಕೆ ಮದ್ಯದ ರುವಾರಿಯನ್ನು ಬಂದಿಸಿದ್ದಾರೆ. ಹೌದು ಹೋಮಿಯೋಪತಿ ಔಷಧದಿಂದ ಮದ್ಯ ತಯಾರಿಸಿದ ಮಾಸ್ಟರ್ ಮೈಂಡ್ ಅನ್ನು ಪೊಲೀಸರು ದೆಹಲಿಯಲ್ಲಿ ಸೆರೆ ಹಿಡಿದಿದ್ದಾರೆ. ಈ ಮದ್ಯ ದುರಂತದ ಮಾಸ್ಟರ್ ಮೈಂಡ್ ಹೆಸರು ರಾಮ್ ಬಾಬು ಆಗಿದ್ದು , ಆತನ ವಯಸ್ಸು 35 ವರ್ಷ ಎಂದು ತಿಳಿದು ಬಂದಿದೆ.
ವಿಷಪೂರಿತ ಮದ್ಯದ ಪ್ರಮುಖ ಪೂರೈಕೆದಾರ ಬಂಧನ:ಛಾಪ್ರಾ ವಿಷಯುಕ್ತ ಮದ್ಯ ಪ್ರಕರಣದಲ್ಲಿ ಮದ್ಯ ಸೇವಿಸಿ ಜನರು ಸಾವನ್ನಪ್ಪಲು ಕಾರಣನಾದ ಕಲಬೆರಕೆ ಮದ್ಯದ ಮುಖ್ಯ ಪೂರೈಕೆದಾರನನ್ನು ವಾರಾಣಸಿಯಲ್ಲಿ ಬಂಧಿಸಲಾಗಿದೆ. ಪ್ರಮುಖ ಪೂರೈಕೆದಾರ ಸಂಜೀವ್ ಕುಮಾರ್ ಆಗಿದ್ದು, ಇವನ ನಂತರ ಈ ಪ್ರಕರಣದಲ್ಲಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.