ಕೋಲ್ಕತ್ತಾ/ಪಶ್ಚಿಮ ಬಂಗಾಳ:ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳ: ಸಮಾನ ವೇತನಕ್ಕೆ ಆಗ್ರಹಿಸಿ ಅಸೆಂಬ್ಲಿ ಎದುರು ಅರೆಕಾಲಿಕ ಶಿಕ್ಷಕರ ಪ್ರತಿಭಟನೆ - VIDEO - teachers protest in west bengal
ಖಾಯಂ ಶಿಕ್ಷಕರಂತೆ ತಮಗೂ ಸಮಾನ ವೇತನ ನೀಡುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳದಲ್ಲಿ ಅರೆಕಾಲಿಕ ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಅರೆಕಾಲಿಕ ಶಿಕ್ಷಕರ ಪ್ರತಿಭಟನೆ
ಪ.ಬಂಗಾಳದ ಅಸೆಂಬ್ಲಿ ಎದುರು ಅರೆಕಾಲಿಕ ಶಿಕ್ಷಕರು ಜಮಾಯಿಸಿ, ಖಾಯಂ ಶಿಕ್ಷಕರಿಗೆ ನೀಡುವಂತೆ ತಮಗೂ ಸಮಾನ ವೇತನ ನೀಡುವಂತೆ ಮತ್ತು ಉದ್ಯೋಗ ಖಾಯಂಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಕೆಲವು ಶಿಕ್ಷಕ -ಶಿಕ್ಷಕಿಯರು ಅಸೆಂಬ್ಲಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಟೀಚರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗ್ತಿದ್ದು, ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.