ಗುಂಟೂರು (ಆಂಧ್ರಪ್ರದೇಶ):ಗುಂಟೂರು ಜಿಲ್ಲೆಯ ನರಸಾರೋಪೇಟ ನಗರದ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜನರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಲು ಎಲ್ಲರೂ ಒಮ್ಮೆಲೆ ಮುಗಿಬಿದ್ದ ಪರಿಣಾಮ ಗೊಂದಲ ಸೃಷ್ಟಿಯಾಯಿತು.
ಪರಿಸ್ಥಿತಿಯನ್ನು ನಿಯಂತ್ರಿಸಲು ನರಸಾರೋಪೇಟ ಸಬ್ ಕಲೆಕ್ಟರ್ ಶ್ರೀವಾಸ್ ನೂಪುರ್ ಅಜಯ್ ಕುಮಾರ್ ಸ್ಥಳಕ್ಕಾಗಮಿಸಿ ತಕ್ಷಣ ಜನರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರು. ನಂತರ ಜನರು ಲಸಿಕೆ ಪಡೆಯಲು ಸರತಿ ಸಾಲುಗಳಲ್ಲಿ ನಿಂತರು.