ಲುಧಿಯಾನ (ಪಂಜಾಬ್):ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂದು ರಾಹುಲ್ ಗಾಂಧಿ ಇಂದು ಘೋಷಿಸಿದ್ದಾರೆ.
ಇಂದು ಲುಧಿಯಾನದಲ್ಲಿ ನಡೆದ ವರ್ಚುವಲ್ ರ್ಯಾಲಿಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಚನ್ನಿ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ತಮ್ಮೊಳಗಿನ ಕೋಪವನ್ನು ತೊರೆದಿದ್ದಾರೆ. ಅಚ್ಚರಿಯ ಒಡನಾಟವನ್ನು ಕಂಡ ರಾಹುಲ್ ಗಾಂಧಿ ಅವರು ಇದರ ಬೆನ್ನಲ್ಲೇ "ಚನ್ನಿ ಅವರು ಬಡ ಕುಟುಂಬದಿಂದ ಬಂದವರು, ಇವರು ಚುನಾವಣೆಯನ್ನು ಎದುರಿಸಲಿದ್ದಾರೆ" ಎಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಅವರ ಹೆಸರನ್ನು ಸೂಚಿಸಿದ್ದಾರೆ. ಸಿಎಂ ಅಭ್ಯರ್ಥಿ ಟಿಕೆಟ್ ಫೈಟ್ನಲ್ಲಿ ಸಿಧು ಮುಂಚೂಣಿಯಲ್ಲಿದ್ದರು. ಆದರೆ ಚನ್ನಿಗೆ ಮಣೆ ಹಾಕಲಾಗಿದೆ.