ಡಾರ್ಜಲಿಂಗ್: ಭಾರತೀಯ ಸೇನೆಗೆ ಸೇರಲು ಇನ್ಮುಂದೆ ಎಲ್ಲಾ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ಭಾರತೀಯ ಸೇನೆಯ ನೇಮಕಾತಿ ವಿಭಾಗದ ಮಹಾನಿರ್ದೇಶಕ ಕರ್ನಲ್ ಕೆ ಸಂದೀಪ್ ಕುಮಾರ್ ಹೇಳಿದ್ದಾರೆ. ಇವತ್ತಿನಿಂದ ಈ ಪ್ರಕ್ರಿಯೆಯು ಜಾರಿಗೆ ಬಂದಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಸೇನಾ ನೇಮಕಾತಿಗೆ ಆನ್‌ಲೈನ್ ಪರೀಕ್ಷೆ : ಉತ್ತರ ಬಂಗಾಳದ ಭಾರತೀಯ ಸೇನೆಯ ಸೇವಕ್ ಮಿಲಿಟರಿ ಸ್ಟೇಷನ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾರು ಸೇನೆ ಸೇರಲು ಬಯಸುತ್ತಾರೋ ಅವರು ಮೊದಲು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ದೇಶದಲ್ಲೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಗ್ನಿವೀರ್ ವಾಯು ಸೇನೆ ಅಭ್ಯರ್ಥಿಗಳಿಗೆ ತರಬೇತಿ ಪ್ರಾರಂಭ
ಸದ್ಯದ ಪರಿಸ್ಥಿತಿಯಲ್ಲಿ ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಈ ಮೊದಲು ಸೇನಾ ನೇಮಕಾತಿ ಸಮಯದಲ್ಲಿ ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಇದೀಗ ಇದನ್ನು ಬದಲಾಯಿಸಲಾಗಿದೆ. ಇನ್ಮುಂದೆ ಸೇನಾ ನೇಮಕಾತಿಯ ಮೊದಲ ಹಂತವಾಗಿ ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಈ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿದಾರರು ಆನ್‌ಲೈನ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ 250 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಬಳಿಕ ದೈಹಿಕ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.