ಶ್ರೀಹರಿಕೋಟಾ, ಆಂಧ್ರಪ್ರದೇಶ: ನಿಗದಿತ ಉಡಾವಣೆಯಂತೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ಮಾರ್ಕ್ 3 (ಎಲ್‌ವಿಎಂ 3) ಹೆವಿ-ಲಿಫ್ಟ್ ಉಪಗ್ರಹವು ಯಶಸ್ವಿಯಾಗಿ ಉಡ್ಡಯನಗೊಂಡಿದೆ.
Chandrayaan 3 missionಯೋಜನಾ ನಿರ್ದೇಶಕ ಪಿ ವೀರಮುತ್ತುವೇಲ್ ಮತ್ತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ LVM3 M4 ವಾಹನವು ಯಶಸ್ವಿಯಾಗಿ ಕಕ್ಷೆಗೆ ಉಡಾವಣೆ ಮಾಡಿದ ನಂತರ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಚಂದ್ರಯಾನ -3 ಅದರ ನಿಖರವಾದ ಕಕ್ಷೆಯಲ್ಲಿ ಚಂದ್ರನತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಬಾಹ್ಯಾಕಾಶ ನೌಕೆಯ ಸರುಕ್ಷಿತವಾಗಿ ಕಕ್ಷೆ ಸೇರಿದೆ ಎಂದು ಇಸ್ರೋ ಹೇಳಿದೆ.
ಇನ್ನು ಈ ಉಪಗ್ರಹ ಭೂಮಿಯಿಂದ ಚಂದ್ರನನ್ನು ತಲುಪಲು ಸುಮಾರು ಒಂದು ತಿಂಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲೆ ಎಲ್‌ವಿಎಂ 3 ರಾಕೆಟ್ ಲ್ಯಾಂಡಿಂಗ್ ಆಗುವ ನಿರೀಕ್ಷೆ ಇದೆ. ಲ್ಯಾಂಡಿಂಗ್ ನಂತರ ಈ ಉಪಗ್ರಹವು ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ಸರಿ ಸುಮಾರು 14 ದಿನಗಳು. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ.
ಈ ಪ್ರಯೋಗ ಯಶಸ್ವಿ ಆದರೆ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ರೋವರ್ ಇಳಿಸಿದ 4ನೇ ರಾಷ್ಟ್ರ ಭಾರತವಾಗಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಹಾಗೂ ಚೀನಾದ ಯೋಜನೆಗಳು ಯಶಸ್ವಿಯಾಗಿದ್ದವು. 2019ರಲ್ಲಿ ಭಾರತ ಮತ್ತು ಇಸ್ರೇಲ್ ಈ ಪ್ರಯತ್ನಕ್ಕೆ ಕೈ ಹಾಕಿದ್ದವು.
2019 ರಲ್ಲಿ ಚಂದ್ರನ ಮೇಲ್ಮೈಯಲ್ಲಿ ತನ್ನ ಮೃದುವಾದ ಲ್ಯಾಂಡಿಂಗ್ ಸಮಯದಲ್ಲಿ ಚಂದ್ರಯಾನ - 2 ಮಿಷನ್ ಸವಾಲುಗಳನ್ನು ಎದುರಿಸಿದ ನಂತರ ಚಂದ್ರಯಾನ-3 ISRO ನ ಅನುಸರಣಾ ಪ್ರಯತ್ನವಾಗಿದೆ ಮತ್ತು ಅಂತಿಮವಾಗಿ ಅದರ ಪ್ರಮುಖ ಮಿಷನ್ ಉದ್ದೇಶಗಳನ್ನು ವಿಫಲವಾಗಿದೆ ಎಂದು ಪರಿಗಣಿಸಲಾಗಿದೆ.